ಮರೋಡಿ: ಪ್ರತಿಯೊಬ್ಬರ ಬದುಕಿನಲ್ಲೂ ಧರ್ಮಾಚರಣೆ ಮುಖ್ಯ. ಅದನ್ನು ಅಳವಡಿಸಿಕೊಂಡರೆ ಉನ್ನತ ಸ್ಥಾನಮಾನ ಪಡೆಯುವ ಜೊತೆಗೆ ಜೀವನದಲ್ಲಿ ಸಾರ್ಥಕತೆ ಪಡೆಯಬಹುದು ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಉಪನ್ಯಾಸಕ ಮಹಾವೀರ್ ಜೈನ್ ಇಚ್ಲಂಪಾಡಿ ಹೇಳಿದರು.
ಅವರು ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆ.08ರ ಶನಿವಾರ ರಾತ್ರಿ ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಮರೋಡಿ ಇದರ ದಶಮಾನೋತ್ಸವ ಮತ್ತು ಸಾರ್ವಜನಿಕ ಶನೀಶ್ವರ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ನಮ್ಮ ಬದುಕಿಗೆ ಅರ್ಥ ಸಿಗಬೇಕಾದರೆ ಕೆಲವೊಂದು ಆಚಾರ ವಿಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅವುಗಳಲ್ಲಿ ಧರ್ಮಾಚರಣೆ ಪ್ರಮುಖವಾಗುದು. ನಮ್ಮ ಪ್ರತಿಯೊಂದು ಹೆಜ್ಜೆಯು ಧರ್ಮದ ಹಾದಿಯಲ್ಲಿದ್ದರೆ ಯಶಸ್ಸು ಖಂಡಿತ ಸಿಗುತ್ತದೆ. ಇಂದಿನ ಪೀಳಿಗೆಯಲ್ಲಿ ಧರ್ಮ ಜಾಗೃತಿ ಕೆಲಸ ನಡೆಯಬೇಕು. ಈ ನಿಟ್ಟಿನಲ್ಲಿ ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮಾತನಾಡಿ, 10 ವರ್ಷಗಳ ಹಿಂದೆ ಆರಂಭಗೊAಡ ಈ ಸಂಘಟನೆಯು ಕ್ಷೇತ್ರದ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ಹೇಳಿದರು.
ಶ್ರೀ ಉಮಾಮಹೇಶ್ವರ ಯಂಗ್ ಸ್ಟಾರ್ ಫ್ರೆಂಡ್ಸ್ ಗೌರವಾಧ್ಯಕ್ಷ ಯಶೋಧರ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಾಕರ ಬುಣ್ಣಾನ್, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್, ಪ್ರಗತಿಪರ ಕೃಷಿಕ ವಿಜಯ ಆರಿಗ ನಿಡ್ಡಾಜೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಉಡುಪಿ ಜಿಲ್ಲಾ ಮುಖ್ಯಸ್ಥ ರವೀಂದ್ರ ಅಂಚನ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಂಬಳ ಕೋಣಗಳ ಯಜಮಾನ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ಪ್ರಗತಿಪರ ಕೃಷಿಕ ಶ್ರೀಧರ ಪೂಜಾರಿ ಭೂತಡ್ಕ ಶುಭ ಹಾರೈಸಿದರು.
ಸನ್ಮಾನ: ದೇವೇಂದ್ರ ಹೆಗ್ಡೆ ಕೊಕ್ರಾಡಿ, ಜಯಂತ ಕೋಟ್ಯಾನ್, ರತ್ನಾಕರ ಬುಣ್ಣಾನ್, ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ರವೀಂದ್ರ ಅಂಚನ್, ನಿರೀಕ್ಷಾ ಎನ್. ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಂಘಟನೆಯ ಮಾಜಿ ಪದಾಧಿಕಾರಿಗಳಾದ ಹರೀಶ್ ಬಂಗೇರ, ವಿದ್ಯಾನಂದ ಪೂಜಾರಿ, ಗಣೇಶ್ ಪೂಜಾರಿ, ಸುಜಿತ್ ಹೆಗ್ಡೆ, ರವಿವರ್ಮ, ಯಶೋಧರ ಕೋಟ್ಯಾನ್, ಸಂಘಟನೆಯ ಅಧ್ಯಕ್ಷ ರಾಘವ ಬಂಗೇರ, ಕಾರ್ಯದರ್ಶಿ ಯಶವಂತ ಪೂಜಾರಿ, ಕೋಶಾಧಿಕಾರಿ ತೇಜವರ್ಮ ಅವರನ್ನು ಅಭಿನಂದಿಸಲಾಯಿತು. ಇದೇ ವೇಳೆ ದಾನಿಗಳನ್ನು ಗೌರವಿಸಲಾಯಿತು.
ಸಂಘಟನೆಯ ಮಹಿಳಾ ಘಟಕವನ್ನು ಉದ್ಘಾಟಿಸಲಾಯಿತು. ಘಟಕದ ಸಂಚಾಲಕರಾದ ಸುರೇಖಾ ಹೆಗ್ಡೆ, ಶಕುಂತಳಾ ಹಾರೊದ್ದು, ಸಹ ಸಂಚಾಲಕರಾದ ಸೌಮ್ಯಾ, ಪ್ರಭಾವತಿ ಹೆಗ್ಡೆ, ಸುಚಿತ್ರ ದಿನೇಶ್ ಗುರಿಯಡ್ಕ ಹಾಗೂ ಸದಸ್ಯರನ್ನು ಅಭಿನಂದಿಸಲಾಯಿತು.
ಶ್ರೀಶಾ, ಸ್ವಸ್ತಿ, ಶ್ರುತಿಕಾ, ಶರಣ್ಯಾ ಪ್ರಾರ್ಥಿಸಿ, ಯಶೋಧರ ಬಂಗೇರ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಂಘಟನೆಯ ಅಧ್ಯಕ್ಷ ರಾಘವ ಬಂಗೇರ ವಂದಿಸಿ, ಗಣೇಶ್ ಬಿ. ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.
ಸುಬ್ರಹ್ಮಣ್ಯ ಪ್ರಸಾದ್ ನೇತೃತ್ವದಲ್ಲಿ ಸಂಜೆ ಕಲಶ ಪ್ರತಿಷ್ಠೆ, ಶ್ರೀ ಶನೀಶ್ವರ ಪೂಜೆ, ರಾತ್ರಿ ಶ್ರೀ ಉಮಾಮಹೇಶ್ವರ ದೇವರಿಗೆ ಶ್ರೀರಂಗಪೂಜೆ ನಡೆಯಿತು.
ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ನಮ್ಮ ಕಲಾವಿದೆರ್ ಬೆದ್ರ ಇವರಿಂದ ಆತೆ ಪನೊಡಾತೆ ತುಳು ನಾಟಕ ಪ್ರದರ್ಶನಗೊಂಡಿತು.