ವಿಜೃಂಭಣೆಯಿಂದ ನೆರವೇರಿದ ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಸಂಭ್ರಮ: ‘ಅಭಿವೃದ್ಧಿ ಕಾರ್ಯಗಳಿಗೆ 5 ಲಕ್ಷ ಅನುದಾನ’ : ಶಾಸಕ ಹರೀಶ್ ಪೂಂಜ ಭರವಸೆ

 


ಬೆಳ್ತಂಗಡಿ : ಶಾಲಾ ಅಮೃತ ಮಹೋತ್ಸವ ಸವಿನೆನಪಿನ ಕಟ್ಟಡ ನಿರ್ಮಾಣ ಮತ್ತು ಇತರ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕರ ನಿಧಿಯಿಂದ 5 ಲಕ್ಷ ರೂ. ಅನುದಾನ ಒದಗಿಸುವುದಾಗಿ ಶಾಸಕ ಹರೀಶ್ ಪೂಂಜ ಭರವಸೆ ನೀಡಿದರು.

ಅವರು ಜ.25ರಂದು ಬಂದಾರು ಗ್ರಾಮದ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಊರ ದಾನಿಗಳ, ಪೋಷಕರ ವಿದ್ಯಾಭಿಮಾನಿಗಳ ಸಹಕಾರ, ಸಹಭಾಗಿತ್ವದಿಂದ ಉತ್ತಮ ಕಾರ್ಯ ಚಟುವಟಿಕೆಗಳ ಮೂಲಕ ಮೈರೋಳ್ತಡ್ಕ ಶಾಲೆ ಮಾದರಿ ಶಾಲೆಯಾಗಿ ಪರಿವರ್ತನೆಯಾಗಲಿ ಎಂದು ಅವರು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಧರ್ಮಗುರು ಮಹಮ್ಮದ್ ಶಫೀಕ್ ಅಹ್ಸನಿ ಈ ಶಾಲೆ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ವಿದ್ಯಾ ಸಂಸ್ಥೆಯ ದೊಡ್ಡ ಸಾಧನೆಯಾಗಿದೆ, ಇಲ್ಲಿ ಹಲವಾರು ದೇವಸ್ಥಾನಗಳಿವೆ, ಮಸೀದಿಗಳಿವೆ, ಚರ್ಚುಗಳಿವೆ, ಮಂದಿರಗಳಿವೆ, ಆದರೆ ಇದೆಲ್ಲದಕ್ಕೂ ಮಿಗಿಲಾಗಿ ಸರ್ವ ಧರ್ಮೀಯರಿಗೆ ಬೇಕಾಗುವ ಕೇಂದ್ರ ಶಾಲೆಯಾಗಿದೆ ಎಂದರು.
ಮಕ್ಕಳನ್ನು ಬದುಕಿನಲ್ಲಿ ಮತ್ತು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದು ಇಂಥ ವಿದ್ಯಾ ಸಂಸ್ಥೆಯಿAದ ಮಾತ್ರ ಸಾಧ್ಯವಿದೆ. ವಿದ್ಯೆ ಇರುವವನಿಗೆ ಮಾತ್ರ ಉನ್ನತವಾದ ಸ್ಥಾನವಿದೆ ಎಂದು ಅವರು ಪ್ರತಿಪಾದಿಸಿದರು.

ನಿವೃತ್ತ ಶಿಕ್ಷಕ ನೋಣಯ್ಯ ಗೌಡ ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸುತ್ತಾ ಶಾಲೆ ಬೆಳೆದು ಬಂದ ದಾರಿಯನ್ನು ತಿಳಿಸಿದರು.

ಮಾಜಿ ತಾಲೂಕು ಪಂಚಾಯತ್ ಸದಸ್ಯ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಯ್ಯ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ವಿದ್ಯಾಭಿಮಾನಿಗಳು, ಪೋಷಕರು ಮತ್ತು ದಾನಿಗಳ ಸರಕಾರಗಳಿಂದ ಪಕ್ಷ, ಜಾತಿ ಮರೆತು ಎಲ್ಲರೂ ಒಗ್ಗಟ್ಟಾಗಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಕಂಡಿಗ ಮಾತನಾಡಿ, ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಸಡಗರ, ಸಂಭ್ರಮದಿAದ ಆಚರಿಸಲು ಗ್ರಾಮಪಂಚಾಯತ್ ನಿಂದ ಅವಕಾಶವಿದ್ದಷ್ಟು ಸಹಕಾರವನ್ನು ನೀಡುವ ಭರವಸೆಯಿತ್ತು ಶುಭ ಹಾರೈಸಿದರು.

ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ಅವರ ಪ್ರಸ್ತಾವನೆಯಲ್ಲಿ ಅಮೃತಮಹೋತ್ಸವದ ಸವಿನೆನಪಿನ ಎರಡು ಕೊಠಡಿ, ರಂಗಮAದಿರ ಬೇಡಿಕೆ ಹಾಗೂ ಅಮೃತ ಮಹೋತ್ಸವ ಪ್ರಯುಕ್ತ ಡಿಸೆಂಬರ್ ವರೆಗೆ ಹಮ್ಮಿಕೊಳ್ಳಲು ಚಿಂತನೆ ನಡೆಸಿರುವ ಕಾರ್ಯಕ್ರಮಗಳ ಮುನ್ನೋಟ ಸಹಿತ ಶಾಲೆಯ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳನ್ನು ಸಭೆಗೆ ತಿಳಿಸಿದರು.

ಕುಪ್ಪೆಟ್ಟಿ ವಲಯ ಸಿ.ರ್.ಪಿ. ವಾರಿಜ ಸೋಮಶೇಖರ್ ಮಾತನಾಡಿ ಶುಭಹಾರೈಸಿದರು.

ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾವತಿ, ಪ್ರಗತಿಪರ ಕೃಷಿಕ ಧರ್ಣಪ್ಪ ಗೌಡ ಬಾನಡ್ಕ, ಧರ್ಮದರ್ಶಿ ಆನಂದಗೌಡ, ನಿವೃತ್ತ ಯೋಧ ಸಂಜೀವ ಗೌಡ, ಧರ್ಮದರ್ಶಿ ಅನಂದ ಗೌಡ ಮುಂಡೂರು, ಭಾರತೀಯ ಅಂಚೆ ಇಲಾಖೆಯ ಉದ್ಯೋಗಿ , ಅ.ಮ. ಸಮಿತಿ ಕೋಶಾಧಿಕಾರಿ ಮೋಹನ್ ಶೆಟ್ಟಿ , ಗ್ರಾ.ಪಂ. ಮಾಜಿ ಅಧ್ಯಕ್ಷೆ ಪರಮೇಶ್ವರಿ, ಮಂ. ಪಂ. ಮಾಜಿ ಸದಸ್ಯ ಬಿ.ಕೆ.ಅಮ್ಮು ಬಾಂಗೇರು, ಗ್ರಾ.ಪಂ. ಸದಸ್ಯೆ ಪವಿತ್ರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಾಂತ್ ಉಪಸ್ಥಿತರಿದ್ದರು.

ಸಹಶಿಕ್ಷಕ ಮಾಧವ ಗೌಡ ಕಾರ್ಯಕ್ರಮ ನಿರೂಪಿಸಿ ಸಹಶಿಕ್ಷಕ ಶ್ರೀಧರ್ ಸ್ವಾಗತಿಸಿದರು. ಸಹಶಿಕ್ಷಕಿ ರಾಜಶ್ರೀ ಪಿ.ವಿ. ಧನ್ಯವಾದವಿತ್ತರು.

error: Content is protected !!