ಬೆಳ್ತಂಗಡಿ: ಪಡಂಗಡಿ, ಕುವೆಟ್ಟು, ಸೋಣಂದೂರು, ಓಡಿಲ್ನಾಳ ಗ್ರಾಮಗಳನ್ನೊಳಗೊಂಡ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ
3 ವರ್ಷದ ಅವಧಿಗೆ ವ್ಯವಸ್ಥಾಪನಾ ಸಮಿತಿ ರಚನೆಗೊಂಡಿದ್ದು, ಈ ಸಮಿತಿಯ ಕೆಲವು ನಿರ್ಧಾರಗಳು ಗ್ರಾಮಸ್ಥರ ಅಸಾಮಾಧಾನಕ್ಕೆ ಕಾರಣವಾಗಿದೆ. ಕಳೆದ ಸೋಮವಾರ ಕ್ಷೇತ್ರದಲ್ಲಿ ನಡೆದ ರಂಗಪೂಜೆ ವೇಳೆ ಬಂದಂತಹ ಸಾರ್ವಜನಿಕರಿಗೆ ಅನ್ನದಾನ ವ್ಯವಸ್ಥೆ ಮಾಡದಿರುವುದು, ಹಾಗೂ ಭಕ್ತರೊಬ್ಬರಿಂದ ರಂಗಪೂಜೆಯ ಬಾಬ್ತು ರೂ 2000 ಹಾಗೂ ಅನ್ನದಾನಕ್ಕಾಗಿ ರೂ 3,000 ಪಡೆದು ರಶೀದಿಯ ಹಿಂಭಾಗದಲ್ಲಿ ಅದನ್ನು ಬರೆದು ಕೊಟ್ಟ ಬಗ್ಗೆಯೂ ಅಸಾಮಾಧಾನಗೊಂಡ ಗ್ರಾಮಸ್ಥರು ವ್ಯವಸ್ಥಾಪನಾ ಸಮಿತಿಯಲ್ಲಿ ಪ್ರಶ್ನಿಸಿದಾಗ ಈ ಬಗ್ಗೆ ಜ 29 ಬುಧವಾರ ಸಂಜೆ 6.30 ಕ್ಕೆ ದೇವಸ್ಥಾನದಲ್ಲಿ ಗ್ರಾಮಸ್ಥರ ಸಭೆ ಕರೆದಿದ್ದರು , ಅದರೆ ಗ್ರಾಮಸ್ಥರೆಲ್ಲರೂ ಸಭೆಗೆ ಆಗಮಿಸಿ ರಾತ್ರಿ 8.30 ರ ವರೆಗೆ ಕಾದರೂ ವ್ಯವಸ್ಥಾಪನಾ ಸಮಿತಿಯವರು ಬಾರದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ದೇವಸ್ಥಾನದ ಎದುರಿನಲ್ಲಿ ಭಜನೆಯ ಮೂಲಕ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯವರು ಬಂದು ಸ್ಪಷ್ಟನೆ ನೀಡಬೇಕು ಇಲ್ಲದಿದ್ದರೆ ತಹಶೀಲ್ದಾರ್ ಬರುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಗ್ರಾಮಸ್ಥರಲ್ಲಿ ಮಾತುಕತೆ ನಡೆಸಿ ವ್ಯವಸ್ಥಾಪನಾ ಸಮಿತಿಯವರಲ್ಲಿ ಈ ಬಗ್ಗೆ ಮಾತನಾಡಿ ಗೊಂದಲಕ್ಕೆ ಪರಿಹಾರ ನೀಡಲಾಗುವುದು ಎಂದರು.

ಅರ್ಚಕರ ಆಯ್ಕೆ ವಿಚಾರದಲ್ಲೂ ಅಸಮಾಧಾನ:

ಹಲವಾರೂ ಸಮಯಗಳಿಂದ ಇಲ್ಲಿನ ಅರ್ಚಕರಾದ ರಾಘವೇಂದ್ರ ಭಟ್ ಮಠ ಇವರು ಭಕ್ತರಲ್ಲಿ ಹಾಗೂ ಗ್ರಾಮಸ್ಥರಲ್ಲಿ ತೋರುತಿದ್ದ ವರ್ತನೆ ಬಗ್ಗೆ ಅಸಾಮಾಧಾನದಲ್ಲಿದ್ದ ಊರವರು ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದೇವರ ಮುಂದೆ ತಂತ್ರಿಗಳ ಊರವರ ಸಮ್ಮುಖದಲ್ಲಿ ದೇವರ ಎದುರು ಮಾಡಿದ ದಿಟ್ಟಮ್ ಪ್ರಾರ್ಥನೆಯಂತೆ ಅರ್ಚಕರನ್ನು ಬದಲಾಯಿಸುವ ಬಗ್ಗೆ ತೀರ್ಮಾನವಾಗಿತ್ತು. ಈ ಪ್ರಾರ್ಥನೆಯಂತೆ ಮುಂದಿನ 12 ವರ್ಷಗಳವರೆಗೆ ಪೂಜೆ ಮಾಡಲು ರಾಘವೇಂದ್ರ ಭಟ್ ಅವರಿಗೆ ಅವಕಾಶ ಇರುವುದಿಲ್ಲ ಎಂಬುವುದಾಗಿತ್ತು. ಅದರೆ ಇದೀಗ ಏಕಾಏಕಿ ವ್ಯವಸ್ಥಾಪನಾ ಸಮಿತಿಯಲ್ಲಿ ಅರ್ಚಕರನ್ನಾಗಿ ಅವರನ್ನೇ ಆಯ್ಕೆ ಮಾಡಿಕೊಂಡಿರುವುದು ಭಕ್ತರಿಗೆ, ಗ್ರಾಮಸ್ಥರಿಗೆ ಅಸಾಮಾಧಾನ ಉಂಟಾಗಿದೆ. ದೇವಸ್ಥಾನಗಳಲ್ಲಿ ರಾಜಕೀಯ ತರಬೇಡಿ, ಪವಿತ್ರ ಕ್ಷೇತ್ರಗಳನ್ನು ಹಾಳು ಮಾಡಬೇಡಿ, ಎಂಬ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.ಇತಿಹಾಸ ಪ್ರಸಿದ್ಧ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ವರುಷ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ದೇವಸ್ಥಾನಕ್ಕೆ ತಾಮ್ರದ ಹೊದಿಕೆ, ನಂದಿಯ ಪ್ರತಿಷ್ಠಾಪನೆಯೊಂದಿಗೆ ನವೀಕರಣಗೊಂಡು , ಸಭಾ ಭವನ, ಪುಷ್ಕರಿಣಿ, ಚಿತ್ರಕೂಟ ಮಾದರಿಯ ನಾಗ ಸನ್ನಿಧಿ, ಮಹಾಧ್ವಾರ ನಿರ್ಮಾಣಗೊಂಡು ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ನಡೆದಿತ್ತು.

error: Content is protected !!