ದಯಾ ವಿಶೇಷ ಶಾಲೆಯಲ್ಲಿ ದಿ. ವಸಂತ ಬಂಗೇರರ ಹುಟ್ಟುಹಬ್ಬ ಆಚರಣೆ

ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಜ.16ರಂದು ದಿ. ವಸಂತ ಬಂಗೇರರವರ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

ವಸಂತ ಬಂಗೇರರವರ ಮಗಳು ಪ್ರೀತಿಶ ಹಾಗೂ ಸ್ನೇಹಿತರರು ಆಗಮಿಸಿ, ತಮ್ಮ ಅನಿಸಿಕೆಗಳನ್ನು ಹಂಚಿ, ದಯಾ ವಿಶೇಷ ಶಾಲೆಯ ವಿಶೇಷ ಚೇತನರ ಸೇವೆಯನ್ನು ಮತ್ತು ಸಂಸ್ಥೆಯನ್ನು ಶ್ಲಾಘಿಸಿದರು.

ವಿಶೇಷ ಚೇತನರ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಶುಭಕೋರಿ, ಎಲ್ಲಾ ಬಳಿಕ ವಿಶೇಷ ಭೋಜನ ನೀಡಿದರು.

ಕಾರ್ಯಕ್ರಮದಲ್ಲಿ ದಯಾ ವಿಶೇಷ ಶಾಲೆಯ ಸಂಚಾಲಕರಾದ ವಂ.ಫಾ. ವಿನೋದ್ ಮಸ್ಕರೇನ್ಹಸ್ ರವರು, ದಿವಂಗತ ವಸಂತ ಬಂಗೇರ ಅವರು ಮಾಡಿದ ಕಾರ್ಯಗಳನ್ನು ಹಾಗೂ ಸಂಸ್ಥೆಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ದಯಾ ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ದಿವ್ಯ ಟಿ ವಿರವರು ಸ್ವಾಗತಿಸಿ ಧನ್ಯವಾದವಿತ್ತರು.

error: Content is protected !!