ಮಂಗಳೂರು : ಬಾಲಿವುಡ್ ನಟ ಸುನಿಲ್ ಶೆಟ್ಟಿ ತುಳು ಸಿನಿಮಾದಲ್ಲಿ ನಟಿಸುತ್ತಿರುವುದು ಒಂದೆಡೆ ಸುದ್ದಿಯಾದರೆ ಇತ್ತ ಕನ್ನಡದ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರೂ ಕೂಡ ತುಳು ಸಿನಿಮಾದಲ್ಲಿ ನಟಿಸುತ್ತಿರುವುದು ಆಶ್ಚರ್ಯದಾಯಕವಾಗಿದೆ.
ಹೌದು, “ಗೋಲ್ಡನ್ ಮೂವೀಸ್” ಸಂಸ್ಥೆಯಡಿ ಶಿಲ್ಪಾ ಗಣೇಶ್ ಅವರು “ಪ್ರೊಡಕ್ಷನ್ ನಂ.1″ (ತಾತ್ಕಾಲಿಕ ಶೀರ್ಷಿಕೆ) ಎಂಬ ತುಳು ಚಲನಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕುದ್ರೋಳಿ ದೇವಸ್ಥಾನದಲ್ಲಿ ಗೋಲ್ಡನ್ ಸ್ಟಾರ್ನ ತುಳು ಸಿನಿಮಾದ ಮುಹೂರ್ತ ನಡೆದಿದ್ದು, ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಪಾಲ್ಗೊಂಡು ಸ್ಟಾರ್ ಮೆರುಗು ತುಂಬಿದ್ದಾರೆ.
ತುಳುನಾಡಿಗೂ ಗಣೇಶ್ ಅವರಿಗೂ ಇರುವ ಅವಿನಾಭಾವ ಸಂಬAಧದ ಬಗ್ಗೆ ಮಾತನಾಡಿದ ಅವರು, “ನಾನು ಮೊದಲು ನಟಿಸಿದ ಸಿನಿಮಾ ಮಂಗಳೂರಿನಲ್ಲಿ ಶೂಟಿಂಗ್ ಆಗಿತ್ತು. ಇದರ ನಿರ್ದೇಶಕ, ಮ್ಯೂಸಿಕ್ ಡೈರೆಕ್ಟರ್ ಮಂಗಳೂರಿನವರಾಗಿದ್ದರು. ನಾನು ಮದುವೆಯಾದದ್ದು ಮಂಗಳೂರಿನ ಹುಡುಗಿಯನ್ನು. ಇದೀಗ ಮಂಗಳೂರಿಗೆ ಬಂದು ತುಳು ಸಿನಿಮಾ ಮಾಡುತ್ತಿದ್ದೇವೆ. ಈ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ತಂಡ ನಿರ್ಧರಿಸಿಲ್ಲ. ಆದರೆ ಹಾಡೊಂದರಲ್ಲಿ ಪಾತ್ರ ಇರುವ ಸಾಧ್ಯತೆ ಇದೆ” ಎಂದಿದ್ದಾರೆ.
ನಿತ್ಯ ಪ್ರಕಾಶ್ ಬಂಟ್ವಾಳ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕ ನಟರಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಮೃತ ನಾಯಕ್, ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಬೋಜರಾಜ್ ವಾಮಂಜೂರ್, ಸಾಯಿ ಕೃಷ್ಣ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಮಿಜಾರ್, ರವಿ ರಾಮಕುಂಜ, ವಜ್ರಧೀರ್ ಜೈನ್, ರೂಪ ವರ್ಕಾಡಿ, ಸದಾಶಿª ಅಮೀನ್, ಸುಂದರ್ ರೈ ಮಂದಾರ, ಚಂದ್ರ ಹಾಸ ಮಾಣಿ, ಹರಿಶ್ಚಂದ್ರ ಪೆರಾಡಿ, ಪಾಂಡುರAಗ ಅಂಚನ್, ಸುರೇಶ್ ಅಂಚನ್, ಜಯಶೀಲಾ ಮರೋಳಿ, ಧೃತಿ ಸಾಯಿ ಸೇರಿ ಹಲವರು ನಟಿಸಲಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಛಾಯಗ್ರಾಹಕರಾಗಿ ಸಂತೋಷ್ ರೈ ಪಾತಜೆ, ಸಂಗೀತ ನಿರ್ದೇಶಕರಾಗಿ ಸ್ಯಾಮೂವಲ್ ಎಬಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಮೋಹನ್ ಭಟ್ಕಳ್, ಮ್ಯಾನೇಜರ್ ಪ್ರಶಾಂತ್ ಆಳ್ವಾ ಕಲ್ಲಾ ಇದ್ದು, ನಿರ್ದೇಶನ ತಂಡದಲ್ಲಿ ಕಿಶೋರ್ ಮೂಡಬಿದ್ರಿ, ಮಣಿ, ಪ್ರಸನ್ನ ಪಿ, ಅಕ್ಷತ್ ವಿಟ್ಲಾ, ಫರಾಜ್ ಕಾರ್ಯ ನಿರ್ವಹಿಸಲಿದ್ದಾರೆ.