ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ ಕಾರ್ಯದರ್ಶಿ, ತುಕರಾಮ್ ಆಯ್ಕೆ:

 

ಬೆಳ್ತಂಗಡಿ: ತಾಲೂಕು ಪತ್ರಕರ್ತರ ಸಂಘದ ಮಹಾಸಭೆ ಹಾಗೂ 2025 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ವಿಘ್ನೇಶ್ ಸಿಟಿ ಕಟ್ಟಡದಲ್ಲಿರುವ ಪತ್ರಕರ್ತರ ಸಂಘದಲ್ಲಿ ಜ. 04 ರಂದು ನಡೆಯಿತು.

ತಾಲೂಕು ಪತ್ರಕರ್ತರ ಸಂಘದ 2025-26 ನೇ ಸಾಲಿನ ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ ಏಣಿಂಜೆ, ಕಾರ್ಯದರ್ಶಿಯಾಗಿ ತುಕರಾಮ್ ಬಿ, ಉಪಾಧ್ಯಕ್ಷರಾಗಿ ಸಂತೋಷ್ ಪಿ ಕೋಟ್ಯಾನ್ ಬಳಂಜ,ಕೋಶಾಧಿಕಾರಿಯಾಗಿ ಜಾರಪ್ಪ ಪೂಜಾರಿ ಬೆಳಾಲು,ಜತೆ ಕಾರ್ಯದರ್ಶಿಯಾಗಿ ಧನಕೀರ್ತಿ ಆರಿಗ ಧರ್ಮಸ್ಥಳ ಅವರು ಅವಿರೋಧವಾಗಿ ಅಯ್ಕೆಯಾದರು.

ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಕಾರ್ಯದರ್ಶಿ ಗಣೇಶ್ ಬಿ ಶಿರ್ಲಾಲು ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು.ವೇದಿಕೆಯಲ್ಲಿ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷ ಶಿಬಿ, ಜತೆ ಕಾರ್ಯದರ್ಶಿ ಮನೋಹರ್ ಬಳಂಜ, ಜಿಲ್ಲಾ ಸಂಘದ ಕಾರ್ಯದರ್ಶಿ ಭುವನೇಶ್ ಗೇರುಕಟ್ಟೆ ಇದ್ದರು.
ನೂತನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯನ್ನು‌ ಸಂಘದ ಹಿರಿಯ ಸದಸ್ಯ, ಆರ್.ಎನ್. ಪೂವಣಿ ನಡೆಸಿಕೊಟ್ಟರು. ನಂತರ ನಡೆದ ಕಾರ್ಯಕ್ರಮದಲ್ಲಿ ಚೈತ್ರೇಶ್ ಇಳಂತಿಲ ಹಾಗೂ ಪದಾಧಿಕಾರಿಗಳು ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಬಿ.ಎಸ್ ಕುಲಾಲ್, ಮಂಜುನಾಥ ರೈ, ದೀಪಕ್ ಅಠವಳೆ, ಅಚ್ಚುಶ್ರೀ ಬಾಂಗೇರು, ಅರವಿಂದ ಹೆಬ್ಬಾರ್, ಹೃಷಿಕೇಶ್ ಧರ್ಮಸ್ಥಳ ಉಪಸ್ಥಿತರಿದ್ದರು.

error: Content is protected !!