ಬೆಳ್ತಂಗಡಿ: ತಾಂತ್ರಿಕ ದೋಷದಿಂದ ರಸ್ತೆ ಮಧ್ಯೆ ಕಾರು ಕೆಟ್ಟುನಿಂತು ರಸ್ತೆಯುದ್ದಕ್ಕೂ ವಾಹನಗಳು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ವಾಹನ ಸವಾರರು ತಾಸುಗಟ್ಟಲೆ ಕಾದ ಘಟನೆ ಡಿ.27ರಂದು ಕಾಶಿಬೆಟ್ಟು ಬಳಿ ಸಂಭವಿಸಿದೆ.
ಉಜಿರೆ ಕಡೆಗೆ ತೆರಳುತ್ತಿದ್ದ ಕಾರು ಇಕ್ಕಟ್ಟಾದ ರಸ್ತೆಯಲ್ಲೇ ಕೆಟ್ಟು ನಿಂತಿದ್ದು , ಇತರ ವಾಹನಗಳು ಸಲೀಸಾಗಿ ಸಾಗಲು ಆಗದೇ ಇರುವ ಕಾರಣ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಲಾರಿ ಹಾಗೂ ಬಸ್ ಸೇರಿದಂತೆ ಘನ ವಾಹನ ಸವಾರರು ಇಕ್ಕಟ್ಟಾದ ರಸ್ತೆಯಲ್ಲಿ ಸಾಗಲು ಹರಸಾಹಸ ಪಟ್ಟಿದ್ದು, ವಾಹನ ಸವಾರರೇ ಟ್ರಾಫಿಕ್ ಜಾಮ್ ಸರಿಪಡಿಸಿದ್ದಾರೆ.