ಮುಲ್ಕಿ ಜನತೆಯ ರಕ್ತ ಹೀರುತಿದ್ದ ಕಂದಾಯ ನಿರೀಕ್ಷಕ ಜಿ.ಎಸ್. ದಿನೇಶ್ ಲೋಕಾಯುಕ್ತ ಬಲೆಗೆ: ಪಹಣಿಯಲ್ಲಿ ಹೆಸರು ಸೇರ್ಪಡೆ, ₹ 4 ಲಕ್ಷದ ಲಂಚದ ಬೇಡಿಕೆ:

 

 

ಮಂಗಳೂರು:ಪಹಣಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ನಾಲ್ಕು ಲಕ್ಷ ಲಂಚದ ಬೇಡಿಕೆ ಇಟ್ಟ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸುರತ್ಕಲ್ ಬಳಿ ನಡೆದಿದೆ.

ಮುಲ್ಕಿ ತಹಶೀಲ್ದಾರ್ ಕಛೇರಿಗೆ ಮೃತಪಟ್ಟವರ ಆಸ್ತಿಯ ಪಹಣಿಯಲ್ಲಿ ವಾರೀಸುದಾರರ ಹೆಸರು ಸೇರ್ಪಡಗೊಳಿಸಲು ತಹಶೀಲ್ದಾರ್ ಕಛೇರಿಗೆ ಸಂಬಂಧಪಟ್ಟವರು ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಕಂದಾಯ ನಿರೀಕ್ಷಕರ ಕಛೇರಿಗೆ ವಿಚಾರಣೆಗಾಗಿ ಕಳುಹಿಸಿದ್ದು, ಮುಲ್ಕಿ ಕಂದಾಯ ನಿರೀಕ್ಷಕ ಜಿ.ಎಸ್.ದಿನೇಶ್ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಇರಿಸಿಕೊಂಡಿದ್ದರಲ್ಲದೇ,ಈ ಬಗ್ಗೆ ವಿಚಾರಿಸಿದಾಗ ಹೆಸರು ಸೇರ್ಪಡೆಗೊಳಿಸಲು ನಾಲ್ಕು ಲಕ್ಷ ಲಂಚದ ಬೇಡಿಕೆ ಇಟ್ಟಿದ್ದಾರೆ.ಈ ಬಗ್ಗೆ ಲೋಕಾಯುಕ್ತಕ್ಕೆ ಪೊಲೀಸರಿಗೆ ದೂರು ನೀಡಿದ ಅರ್ಜಿದಾರರು, ದೂರಿನ‌ ಮೇರೆಗೆ ಕಾರ್ಯಪೃವೃತ್ತರಾದ ಲೋಕಾಯುಕ್ತ ಪೊಲೀಸರ ತಂಡ ಡಿ 19 ರಂದು ಬೆಳಿಗ್ಗೆ ಮುಲ್ಕಿಯ ಕಂದಾಯ ನಿರೀಕ್ಷಕ ಜಿ.ಎಸ್. ದಿನೇಶ್ ಪಿರ್ಯಾದಿದಾರರಿಂದ ರೂ 4 ಲಕ್ಷ ಲಂಚದ ಹಣವನ್ನು ಸುರತ್ಕಲ್ ಜಂಕ್ಷನ್ ಬಳಿ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ತಕ್ಷಣ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಕಾರ್ಯಚರಣೆಯಲ್ಲಿ ಎಂ.ಎ. ನಟರಾಜ, ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ, ಇವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕ ಡಾ. ಗಾನ ಪಿ. ಕುಮಾರ್, ಪೊಲೀಸ್ ನಿರೀಕ್ಷಕ ಅಮಾನುಲ್ಲಾ, ಎ. ಸುರೇಶ್ ಕುಮಾರ್, ಚಂದ್ರಶೇಖರ್ ಕೆ.ಎನ್, ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

error: Content is protected !!