ಉಪ್ಪಿನಂಗಡಿಯಲ್ಲಿ ಬೆಳಗ್ಗೆಯೇ ಟ್ರಾಫಿಕ್ ಜಾಮ್ : ಪರಿಸ್ಥಿತಿ ನಿಭಾಯಿಸಬೇಕಾದ ಟ್ರಾಫಿಕ್ ಪೊಲೀಸರು ದಂಡ ವಸೂಲಿಯಲ್ಲಿ ಬ್ಯುಸಿ !!: ಟ್ರಾಫಿಕ್ ಸುವ್ಯವಸ್ಥೆಗೆ ಕ್ರಮಕೈಗೊಳ್ಳಲು ಸಾರ್ವಜನಿಕರ ಆಗ್ರಹ

ಉಪ್ಪಿನಂಗಡಿ: ಉಪ್ಪಿನಂಗಡಿ ಪಟ್ಟಣದಲ್ಲಿ ಬೆಳಗ್ಗೆ 11ರ ಸುಮಾರಿಗೆ ಟ್ರಾಫಿಕ್ ಜಾಮ್  ಉಂಟಾಗಿದ್ದು, ಪರಿಸ್ಥಿತಿ ನಿಭಾಯಿಸಬೇಕಾದ ಟ್ರಾಫಿಕ್ ಪೊಲೀಸರು ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಬಳಿ ಚೆಕ್ಕಿಂಗ್ ನಿರತರಾಗಿದ್ದು ಕಂಡು ಬಂತು, ಇತ್ತ ಪಟ್ಟಣದಲ್ಲಿ ಸಾರ್ವಜನಿಕರು ಟ್ರಾಫಿಕ್ ಜಾಂ ಸಮಸ್ಯೆಯಿಂದ ಪರದಾಡುವಂತಾಯಿತು.‌

ಪಟ್ಟಣದಲ್ಲಿ ಉಂಟಾಗಿದ್ದ ಈ ಜಾಂ ನಿಭಾಯಿಸಲು ಹೋಂ ಗಾರ್ಡ್ ಸಿಬ್ಬಂದಿ ನೆರವಾದರೂ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಯಿತು. ಜಾಂನಲ್ಲಿ ಸಾರಿಗೆ ಬಸ್ ಸೇರಿ ಹಲವು ವಾಹನಗಳು ಸಿಲುಕಿಕೊಂಡು ಪರದಾಡುವಂತಾಯಿತು. ಟ್ರಾಫಿಕ್ ಪೊಲೀಸರು ಕೇವಲ ದಂಡ ವಸೂಲಿಗೆ ಮಾತ್ರ ಸೀಮಿತರಾಗಿದ್ದಾರೆ ಎಂಬ ಮಾತುಗಳೂ ಕೇಳಿ ಬಂದವು.

ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಸಹಿತ ವಿವಿಧ ಕಾರಣಗಳಿಂದ ಆಗಾಗ ಟ್ರಾಫಿಕ್ ಜಾಂ ಉಂಟಾಗುತ್ತಿದೆ, ಪಟ್ಟಣದ ರಸ್ತೆಯೂ ಹದಗೆಟ್ಟಿದ್ದು ಆಗಾಗ ಸವಾರರ, ಸಾರ್ವಜನಿಕರ ತಾಳ್ಮೆ ಪರೀಕ್ಷೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಗಳಲ್ಲಿ ಟ್ರಾಫಿಕ್ ಪೊಲೀಸರು ಗಗನ ಕುಸುಮವಾಗಿದ್ದು, ಕೇವಲ ದಂಡ ವಸೂಲಿ ಸ್ಥಳಗಳಲ್ಲಿ ಕಂಡು ಬರುತ್ತಿರುವುದು ಸಾರ್ವಜನಿಕರ ಕೋಪವನ್ನು ಇಮ್ಮಡಿಗೊಳಿಸಿದೆ. ಆದ್ದರಿಂದ ಪಟ್ಟಣದಲ್ಲಿ ಟ್ರಾಫಿಕ್ ಸುವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: Content is protected !!