ಬೆಳಾಲು: ನೇತ್ರಾವತಿ ನದಿಯಲ್ಲಿ ಡಿ.02ರಂದು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬೆಳಾಲು ಸುರುಳಿ ನಿವಾಸಿ ಪ್ರಸಾದ್ (38) ಅವರ ಮೃತದೇಹ ಪತ್ತೆಯಾಗಿದೆ.
ಬೆಳಾಲು ಗ್ರಾಮದ ಕೂಡಿಗೆ ಬಳಿಯ ನೇತ್ರಾವತಿ ನದಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಶೌರ್ಯ ತುರ್ತು ಸ್ಪಂದನಾ ಘಟಕದ ತಂಡ ಅಗ್ನಿ ಶಾಮಕ ದಳ ಬೋಟ್ ನಲ್ಲಿ ನಿರಂತರ ಎರಡು ಗಂಟೆ ಹುಡುಕಾಟ ನಡೆಸಿ ರಾತ್ರಿ 11 ಗಂಟೆ ಸುಮಾರಿಗೆ ಮುಳುಗು ತಜ್ಞ ಇಸ್ಮಾಯಿಲ್ ಸಂಜಯನಗರ ಸಹಕಾರದಲ್ಲಿ ಮೃತದೇಹ ಪತ್ತೆಯಾಗಿದೆ.
ಪ್ರಸಾದ್ ಅವರು ಆರ್ ಎಸ್ ಎಸ್ ಸಂಘದ ಪ್ರಚಾರಕರಾಗಿ 5 ವರ್ಷ ಕಾರ್ಯ ನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಜಿಲ್ಲಾ ಸಂಯೋಜಕರಾಗಿದ್ದರು.