ಕುಲಕ್ಕೇ ಕಳಂಕ ಎಂದು ತನ್ನ ಸ್ವಂತ ಅಕ್ಕನನ್ನೆ ತಮ್ಮ ಮಚ್ಚಿನಿಂದ ಕಡಿದು ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯಲ್ಲಿ ಸಂಭವಿಸಿದೆ.
ಬಹಿರಂಗವಾದ ಮಾಹಿತಿಯ ಪ್ರಕಾರ, ರಂಗಾ ರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿ ಮಹಿಳಾ ಪೊಲೀಸ್ ಪೇದೆ ನಾಗಮಣಿ ಎಂಬವರು ಡಿ.02ರಂದು ತನ್ನ ಸ್ಕೂಟಿಯಲ್ಲಿ ರಾಯಪೋಲ್‌ನಿಂದ ಮನ್ನೆಗುಡಕ್ಕೆ ಹೋಗುತ್ತಿದ್ದ ವೇಳೆ ರಾಯಪೋಲ್ ತಲುಪಿದ ತಕ್ಷಣ ಆಕೆಯ ಸಹೋದರ ಪರಮೇಶ್ ತನ್ನ ಕಾರಿನಿಂದ ಆಕೆಯ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ. ಆಕೆ ನೆಲದ ಮೇಲೆ ಬಿದ್ದ ನಂತರ ಪರಮೇಶ್ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ.
ಬಹಿರಂಗವಾದ ಮಾಹಿತಿಯ ಪ್ರಕಾರ, ರಂಗಾ ರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿ ಮಹಿಳಾ ಪೊಲೀಸ್ ಪೇದೆ ನಾಗಮಣಿಯನ್ನು ಆಕೆಯ ಸಹೋದರ ಸೋಮವಾರ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೂಲಗಳ ಪ್ರಕಾರ, ನಾಗಮಣಿ ತನ್ನ ಸ್ಕೂಟಿಯಲ್ಲಿ ರಾಯಪೋಲ್‌ನಿಂದ ಮನ್ನೆಗುಡಕ್ಕೆ ಹೋಗುತ್ತಿದ್ದಾಗ ರಾಯಪೋಲ್ ತಲುಪಿದ ತಕ್ಷಣ ಆಕೆಯ ಸಹೋದರ ಪರಮೇಶ್ ತನ್ನ ಕಾರಿನಿಂದ ಆಕೆಯ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾನೆ. ಆಕೆ ನೆಲದ ಮೇಲೆ ಬಿದ್ದ ನಂತರ ಪರಮೇಶ್ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ನಾಗಮಣಿ ಅವರ ಇತ್ತೀಚಿನ ಪ್ರೇಮ ವಿವಾಹವೇ ಕೊಲೆಗೆ ಕಾರಣ ಎಂದು ಶಂಕಿಸಿದ್ದಾರೆ. ಇತ್ತೀಚೆಗಷ್ಟೇ ನಾಗಮಣಿ ಮನೆಯವರ ಅಪೇಕ್ಷೆಗೆ ವಿರುದ್ಧವಾಗಿ ಒಂದು ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಆಕೆಯ ಸಹೋದರ ಆಕೆಯ ನಿರ್ಧಾರದಿಂದ ಅತೃಪ್ತರಾಗಿದ್ದನು ಎಂದು ನಂಬಲಾಗಿದೆ. ಈ ಸಂಪೂರ್ಣ ಘಟನೆಯ ನಂತರ ಮೃತ ಮಹಿಳಾ ಪೇದೆಯ ಸಹೋದರ ಪರಮೇಶ್ ತಲೆಮರೆಸಿಕೊಂಡಿದ್ದಾನೆ. ಪರಮೇಶ್‌ಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.