ಅಪ್ಪ ಪಡೆದ 1 ಲಕ್ಷ ರೂ. ಸಾಲ: ಮಗನನ್ನು ಒತ್ತೆಯಾಗಿ ಇಟ್ಟುಕೊಂಡ ಮಾಲೀಕ..!: ಕಾಲಿಗೆ ಕಬ್ಬಿಣದ ಸರಪಳಿ: ಸಂಬಳವಿಲ್ಲದೆ ಢಾಬಾದಲ್ಲಿ ಕೆಲಸ

ಧಾರವಾಡ: ವ್ಯಕ್ತಿಯೊಬ್ಬರು ಪಡೆದಿದ್ದ 1 ಲಕ್ಷ ರೂ. ಸಾಲಕ್ಕಾಗಿ ಅವರ ಮಗನನ್ನು ಮಾಲೀಕ ಒತ್ತೆಯಾಗಿ ಇಟ್ಟುಕೊಂಡ ಅಮಾನವೀಯ ಘಟನೆ ಹೊಸತೇಗೂರಿನ ಢಾಬಾವೊಂದರಲ್ಲಿ ನಡೆದಿದೆ.

ವೆಂಕಟಾಪುರದ ಅರುಣಕುಮಾರ ಯಾದವ (50) ತಮ್ಮ ಪುತ್ರ ಕಿರಣಕುಮಾರ ಯಾದವ (26) ಜತೆ ಓಲ್ಡ್ ಢಾಬಾದಲ್ಲಿ 4 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅಡಚಣೆಗಾಗಿ ಮಾಲಕನ ಬಳಿ 1 ಲಕ್ಷ ರೂ. ಸಾಲ ಪಡೆದಿದ್ದರು. ತಂದೆ ಅರುಣಕುಮಾರ ಢಾಬಾದಿಂದ ಹೊರ ಹೋಗಿದ್ದರಿಂದ ಢಾಬಾ ಮಾಲಕ ಪುತ್ರ ಕಿರಣಕುಮಾರ್ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು.

ವಿಷಯ ತಿಳಿದು ಎಸ್‌ಪಿ ಡಾ| ಗೋಪಾಲ ಬ್ಯಾಕೋಡ್ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕ್ರಮಕ್ಕೆ ಸೂಚಿಸಿದ್ದಾರೆ.

error: Content is protected !!