ಸಾಂದರ್ಭಿಕ ಚಿತ್ರ
ಒಡಿಶಾ : ಹುಲಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಬೇಯಿಸಿದ ತಿಂದಿರುವ ಆಘಾತಕಾರಿ ಘಟನೆ ನುವಾಪಾಡಾ ಜಿಲ್ಲೆಯಲ್ಲಿ ನಡೆದಿದೆ.
4 ಬೇಟೆಗಾರರು ಹುಲಿಯನ್ನು ಬೇಟೆಯಾಡಿದ್ದು, ವಿಚಾರ ತಿಳಿದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಹುಲಿ ಚರ್ಮ, ಮಾಂಸ, ಉಗುರು, ಹಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೇಟೆಗಾರರ ಪ್ರಕಾರ, ಕಾಡು ಹಂದಿ ಬೇಟೆಯಾಡಲು ಕಾಡಿನಲ್ಲಿ ವಿದ್ಯುತ್ ತಂತಿಯನ್ನ ಹರಡಿದ್ದಾರೆ. ಆದರೆ ಕಾಡುಹಂದಿಯ ಬದಲು ಹುಲಿ ಬಿದ್ದಿದೆ. ನಂತರ, ಹುಲಿಯ ಕಾಲುಗಳು, ಬಾಲ, ಉಗುರುಗಳು ಮತ್ತು ಹಲ್ಲುಗಳನ್ನು ಪ್ರತ್ಯೇಕವಾಗಿ ಕತ್ತರಿಸಿ, 4 ಮಂದಿ ಹುಲಿ ಮಾಂಸವನ್ನು ಬೇಯಿಸಿ ತಿಂದಿದ್ದಾರೆ.
ಅಕ್ರಮ ವನ್ಯಜೀವಿ ಬೇಟೆ ಪ್ರಕರಣದಲ್ಲಿ ಇಬ್ಬರು ಬೇಟೆಗಾರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಘಟನೆಯಲ್ಲಿ ಇನ್ನಿಬ್ಬರು ಭಾಗಿಯಾಗಿರುವುದು ಪತ್ತೆಯಾಗಿದೆ. ಅರಣ್ಯ ಇಲಾಖೆ ತನಿಖೆ ತನಿಖೆ ಮುಂದುವರೆಸಿದ್ದಾರೆ.