ಸೇವಾಭಾರತಿ ಕನ್ಯಾಡಿ : ನ.14 ರಂದು ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ

ಬೆಳ್ತಂಗಡಿ: “ದಿವ್ಯಾಂಗರಿಗೆ ಪುನಶ್ಚೇತನ” ಕಾರ್ಯವನ್ನು ನಿರಂತರವಾಗಿ ನಡೆಸುತ್ತಾ ಬಂದಿರುವ ಸೇವಾ ಭಾರತಿ ಕನ್ಯಾಡಿ ಇದರ ನೂತನ ಕಟ್ಟಡಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನ.14ರಂದು ಕನ್ಯಾಡಿ ಸೇವಾ ನಿಕೇತನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸ್ಥಾಪಕ ಮತ್ತು ಖಜಾಂಜಿ ಕೆ. ವಿನಾಯಕ ರಾವ್ ಹೇಳಿದರು.

ನ.10ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, “ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯವಾಹಕ ತಿಪ್ಪೇಸ್ವಾಮಿ ನೆರವೇರಿಸಲಿದ್ದಾರೆ. ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಉಪಸ್ಥಿಯಲ್ಲಿ ಇತರ ಜನಪ್ರತಿನಿಧಿಗಳು,ಗಣ್ಯರು, ದಾನಿಗಳು ಭಾಗವಹಿಸಲಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಸೇವೆಯನ್ನು ನೀಡುತ್ತಿರುವ ಬೆಳ್ಳಣ್ ನ ಹ್ಯುಮಾನಿಟಿ ಟ್ರಸ್ಟ್ ಸಂಸ್ಥಾಪಕ ರೋಶನ್ ಹಾಗೂ ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಇವರನ್ನು ಗೌರವಿಸಲಾಗುತ್ತದೆ” ಎಂದರು.

ದ.ಕ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು, ಹಾಸನ 6 ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡAತೆ ಬೆನ್ನುಹುರಿ ಅಪಘಾತಕ್ಕೊಳಗಾಗಿ ಸೊಂಟದ ಕೆಳಭಾಗ ಸ್ಪರ್ಶಜ್ಞಾನ ಮತ್ತು ನಿಯಂತ್ರಣವನ್ನು ಕಳೆದುಕೊಂಡAತಹ ವಿಶೇಷ ಚೇತನರಿಗಾಗಿ ಕೊಕ್ಕಡದ ಸೌತಡ್ಕದಲ್ಲಿ ಸೇವಾಧಾಮ ಎಂಬ ಹೆಸರಿನ ಪುನಶ್ಚೇತನ ಕೇಂದ್ರವನ್ನು ಪ್ರಾರಂಭಿಸಿದ್ದು, ಈಗಾಗಲೇ 688 ಬೆನ್ನು ಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಿ, ಕೇಂದ್ರದ ಮುಖಾಂತರ ಸುಮಾರು 220 ಮಂದಿ ಪುನಶ್ಚೇತನ ಪಡೆದುಕೊಂಡಿರುತ್ತಾರೆ.

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಸಮುದಾಯದಿಂದ ದೂರ ಉಳಿಯುವುದು ಮಾನಸಿಕ ಖಿನ್ನತೆಗೆ ಹಾಗೂ ಹಲವು ದ್ವಿತೀಯಾಂತರ ಸಮಸ್ಯೆಗಳಿಗೆ ಒಳಗಾಗಿರುತ್ತಾರೆ. ಇಂತಹ ದಿವ್ಯಾಂಗರನ್ನು ಒಗ್ಗೂಡಿಸಿ ಅವರಿಗೆ ಫಿಸಿಯೋಥೆರಪಿ, ಆಕ್ಯೂಪೇಶನಲ್ ಥೆರಪಿ,ಜೀವನ ಕೌಶಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡುವುದರ ಮೂಲಕ ಅವರ ಜೀವನ ಶೈಲಿಯನ್ನು ಸುಲಭಗೊಳಿಸಿ ಮತ್ತೆ ಸಮಾಜಕ್ಕೆ ಬರುವಂತಹ ಪ್ರಯತ್ನ ನಮ್ಮ ಸಂಸ್ಥೆಯಿAದ ನಡೆಯುತ್ತಿದೆ” ಎಂದು ಹೇಳಿದರು

“ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಒಟ್ಟು 26 ಉಚಿತ ವೈದ್ಯಕೀಯ ತಪಾಸಣೆ ಮಾಹಿತಿ ಹಾಗೂ ಜಾಗೃತಿ ಶಿಬಿರ, 465 ಸಾಧನ ಸಲಕರಣೆಗಳು, 113 ಮಂದಿ ದಿವ್ಯಾಂಗರಿಗೆ ಸ್ವಉದ್ಯೋಗಕ್ಕೆ ನೆರವು, ಆರೋಗ್ಯ ಯೋಜನೆಯಡಿಯಲ್ಲಿ 98 ಶಿಬಿರವನ್ನು ನಡೆಸಿ 10,000 ಕ್ಕಿಂತ ಅಧಿಕ ಯೂನಿಟ್ ರಕ್ತ ಸಂಗ್ರಹಣೆ, 329 ಉಚಿತ ಮತ್ತು ರಿಯಾಯಿತಿ ದರದಲ್ಲಿ ಆಂಬುಲೆನ್ಸ್ ಸೇವೆ, ಸಬಲಿನಿ ಯೋಜನೆಯಡಿಯಲ್ಲಿ 29 ಟೈಲರಿಂಗ್ ಶಿಬಿರವನ್ನು ನಡೆಸಿ 650ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಹೀಗೆ ಹಲವಾರು ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದೇವೆ” ಎಂದರು.

ಸೇವಾ ಭಾರತಿ ಅಧ್ಯಕ್ಷೆ ಸ್ವರ್ಣಗೌರಿ, ಕಾರ್ಯದರ್ಶಿ ಬಾಲಕೃಷ್ಣ ನೈಮಿಷ, ಕ್ಷೇತ್ರ ಸಂಯೋಜಕ ಕುಸುಮಾಧರ್ ಉಪಸ್ಥಿತರಿದ್ದರು.

error: Content is protected !!