ನವದೆಹಲಿ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಎನ್ ಸಿಪಿ ಮುಖಂಡ ಬಾಬಾ ಸಿದ್ಧಿಕಿ ಹ*ತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದು, ಸಾಬರಮತಿ ಜೈಲಿನಲ್ಲಿ ಬಂಧಿಯಾಗಿರುವ ಭೂಗತ ಪಾತಕಿ ಬಿಷ್ಣೋಯಿಯನ್ನು ಯಾವ ಪೊಲೀಸ್ ಅಧಿಕಾರಿಯಾಗಲಿ ಹ*ತ್ಯೆಗೈದರೆ ಅವರಿಗೆ 1,11,11,111 ರೂಪಾಯಿ ಬಹುಮಾನ ನೀಡುವುದಾಗಿ ಕ್ಷತ್ರೀಯ ಕರ್ಣಿ ಸೇನಾ ಘೋಷಿಸಿದೆ ಎಂದು ಝೀ ನ್ಯೂಸ್ ಟಿವಿ ವರದಿ ಮಾಡಿದೆ.
ಲಾರೆನ್ಸ್ ಬಿಷ್ಣೋಯಿ ಪಾತಕ ಕೃತ್ಯ ಎಸಗುತ್ತಿದ್ದರೂ ಕೂಡಾ ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರ ಕಣ್ಮುಚ್ಚಿ ಕುಳಿತಿರುವುದಾಗಿ ಶೇಖಾವತ್ ಆರೋಪಿಸಿದ್ದು ಅವನನ್ನು ಹ*ತ್ಯೆಗೈಯುವ ಯಾವುದೇ ಪೊಲೀಸ್ ಅಧಿಕಾರಿ ಇರಲಿ ಅವರಿಗೆ 1,11,11,111 ರೂಪಾಯಿ ಇನಾಮು ನೀಡುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ.
ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಭದ್ರತೆ ಮತ್ತು ಸಂಪೂರ್ಣ ವ್ಯವಸ್ಥೆಗಳ ಜವಾಬ್ದಾರಿಯು ಸೇನೆಯ ಮೇಲಿರುತ್ತದೆ ಎಂದು ಅವರು ಹೇಳಿದರು.