ಸಿಂಗಾಪುರ್ ಏರ್ ಇಂಡಿಯಾಗೆ ಬಾಂಬ್ ಬೆದರಿಕೆ..!: ಬೆಂಗಾವಲಾಗಿ ಎರಡು ಯುದ್ದ ವಿಮಾನಗಳ ನಿಯೋಜನೆ: ಸುರಕ್ಷಿತವಾಗಿ ನಿಲ್ದಾಣ ತಲುಪಿದ ವಿಮಾನ

 

ಸಾಂದರ್ಭಿಕ ಚಿತ್ರ

ಸಿಂಗಾಪುರಕ್ಕೆ ಹೊರಟಿದ್ದ ಎಎಕ್ಸ್ ಬಿ 684 ವಿಮಾನದಲ್ಲಿ ಬಾಂಬ್ ಇದೆ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್‌ಗೆ ಇಮೇಲ್ ಬಂದಿತ್ತು. ಈ ಬೆನ್ನಲ್ಲೆ ಎಚ್ಚೆತ್ತ ವಾಯುಪಡೆ ಎರಡು ಯುದ್ದ ವಿಮಾನಗಳ ನಿಯೋಜನೆ ಮಾಡಿ ಬೆಂಗಾವಲು ನೀಡಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಅಲ್ಲಿನ ರಕ್ಷಣಾ ಸಚಿವ ಎನ್‌ಜಿ ಇಂಗ್ ಹೆನ್, “ಸಿಂಗಾಪುರಕ್ಕೆ ಹೊರಟಿದ್ದ ಎಎಕ್ಸ್ ಬಿ 684 ವಿಮಾನದಲ್ಲಿ ಬಾಂಬ್ ಇದೆ ಎಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ಗೆ ಇಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಆರ್‌ಎಸ್‌ಎಎಫ್‌ನ ಎರಡು ಯುದ್ಧ ವಿಮಾನಗಳನ್ನು ಅದರ ಬೆಂಗಾವಲಾಗಿ ನಿಯೋಜಿಸಲಾಗಿದೆ. ಅಂತಿಮವಾಗಿ ಇಂದು ರಾತ್ರಿ ಸುಮಾರು 10:04 ಗಂಟೆಗೆ ಸಿಂಗಪುರ್ ಚಾಂಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿದಿದೆ” ಎಂದು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಸುಮಾರು 8.25ಕ್ಕೆ ಬಾಂಬ್ ಬೆದರಿಕೆ ಕುರಿತು ಎಚ್ಚರಿಕೆ ನೀಡಲಾಗಿದ್ದು ಆದರೆ ವಾಯುಪಡೆಯ ಬೆಂಗಾವಲಿನ ಮೂಲಕ ರಾತ್ರಿ 10.04ರ ಸುಮಾರಿಗೆ ವಿಮಾನ ಸುರಕ್ಷಿತವಾಗಿ ಚಾಂಗಿ ವಿಮಾನ ನಿಲ್ದಾದಲ್ಲಿ ಇಳಿದಿದೆ. ವಿಮಾನದ ಸುರಕ್ಷಿತ ಲ್ಯಾಂಡಿಂಗ್‌ನಲ್ಲಿ ಭಾಗಿಯಾದ ಸಿಂಗಾಪುರ್ ಸೇನಾ ಬಲ ಮತ್ತು ಗೃಹ ತಂಡದ ಸಮರ್ಪಣಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು, ಸಿಂಗಾಪೂರ್ ಸೇನಾ ಬಲ ಮತ್ತು ಗೃಹ ತಂಡದ ವೃತ್ತಿಪರತೆ ಮತ್ತು ಸಮರ್ಪಣೆಗೆ ಧನ್ಯವಾದ ತಿಳಿಸಲಾಗಿದೆ.

ವಿಮಾನ ಲ್ಯಾಂಡ್ ಆದ ಬಳಿಕ ಸಂಪೂರ್ಣ ತಪಾಸಣೆ ನಡೆಸಲಾಗಿದ್ದು, ಯಾವುದೇ ಬೆದರಿಕೆ ಕಂಡು ಬಂದಿಲ್ಲ. ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಈ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ನಡೆಸಲಾಗುವುದು ಎಂದು ರಕ್ಷಣಾ ಸಚಿವ ತಿಳಿಸಿದ್ದಾರೆ.

error: Content is protected !!