ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ಬಗ್ಗೆ ಕೋಡಿಶ್ರೀ ಸ್ಫೋಟಕ ಮಾತುಗಳನ್ನು ಹೇಳಿದ್ದಾರೆ.
ಆರೋಪಿ ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿ, ಜಾಮೀನು ಸಿಗದೇ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದಾರೆ. ಹೀಗಾಗಿ ಅವರು ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಈ ಮಧ್ಯೆ ಕೋಡಿಶ್ರೀ ದರ್ಶನ್ ಕುರಿತು ಶಾಕಿಂಗ್ ಮಾತುಗಳನ್ನು ಹೇಳಿದ್ದಾರೆ.
“ಪಾಪದ ಪಾಷ ಕಳೆಯಬೇಕಿದೆ. ತಾನು ಮಾಡಿದ ಕರ್ಮ ಬಲವಂತವಾದರೆ ಯಾರೇನು ಮಾಡಿರುವರು. ಮನುಷ್ಯ ಪಾಪ ಮಾಡಲು ಹೆದರಬೇಕು. ಆದರೆ ಮನುಷ್ಯ ಪುಣ್ಯದ ಕೆಲಸ ಮಾಡಲು ಹೆದರಿ, ಪಾಪಾದ ಕೆಲಸ ಮಾಡಲು ಹೆದರುವುದಿಲ್ಲ” ಎಂದಿದ್ದಾರೆ.