ತಲೆಮರೆಸಿಕೊಂಡಿದ್ದ 34 ಪ್ರಕರಣಗಳ ಆರೋಪಿ ಬಂಧನ: ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ


ಬೆಳ್ತಂಗಡಿ :  ವಿವಿಧ  ಪ್ರಕರಣಗಳಲ್ಲಿ  ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯೋರ್ವನನ್ನು ಅ.13ರಂದು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ

ನ್ಯಾಯಲಯ ಸಿ ಸಿ ನಂಬ್ರ-176/23, 177/23, 543/23, 51/15, ಠಾಣಾ ಅಕ್ರ 127/13, 224/13, 398/13, 402/13 ಕಲಂ : 457,380 ಐಪಿಸಿ ಪ್ರಕರಣದಲ್ಲಿ ವಾರಂಟು ಆರೋಪಿಯಾಗಿದ್ದ ಹಮೀದ್ @ ಜಪಾರ್ ಹಮೀದ್ @ ಕುಂಹಿಮೋನು ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಪಡಂಗಡಿ ಎಂಬಲ್ಲಿಂದ ದಸ್ತಗಿರಿ ಮಾಡಿ ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರು ಬಿ ಜಿ ಸುಬ್ಬಾಪೂರ್ ಮಠ, ಉಪ ನೀರಿಕ್ಷಕರು ಮುರಳೀಧರ್ ಮತ್ತು ಯಲ್ಲಪ್ಪ ರವರ ನಿರ್ದೇಶನದಂತೆ ಪೊಲೀಸ್ ಸಿಬ್ಬಂದಿಗಳಾದ  ವ್ರಷಭ,  ಬೆಣ್ಣಿಚ್ಚನ್, ಮತ್ತು ಪಿ ಮುನಿಯ ನಾಯ್ಕ್,  ಸುನಿಲ್ ಭಾಗಿಯಾಗಿದ್ದರು.

ಆರೋಪಿ ಮೇಲೆ ದ. ಕ ಜಿಲ್ಲೆಯ ಬಂಟ್ವಾಳ, ಉಪ್ಪಿನಂಗಡಿ, ಕಡಬ, ಪುತ್ತೂರು, ವೇಣೂರ್, ಧರ್ಮಸ್ಥಳ, ಪುಂಜಾಲಕಟ್ಟೆ, ಮಂಗಳೂರು ನಗರ, ಬಂದರು ಠಾಣೆ. ಹೊರ ಜಿಲ್ಲೆಗಳಾದ ಹಾಸನದ ಬೇಲೂರು ಚಿಕ್ಕಮಂಗಳೂರು ಜಿಲ್ಲೆ ಓ. ಖ ಪುರ, ಕೊಪ್ಪ, ಹರಿಹರ ಪುರ, ಚಿಕ್ಕಮಂಗಳೂರು , ಮೂಡಿಗೆರೆ, ಉಡುಪಿ ಜಿಲ್ಲೆ ಪಡುಬಿದ್ರೆ, ಮಡಿಕೇರಿ ಹಾಗೂ ಹೊರ ರಾಜ್ಯ ಕೇರಳದಲ್ಲಿ ಸುಮಾರು 34 ಕಳ್ಳತನಾದ ಪ್ರಕರಣಗಳು ದಾಖಲಾಗಿದೆ.

error: Content is protected !!