ಪತಿಯ ಸಂಬಂಧಿಗೆ ಯಕೃತ್ ದಾನ: ತನ್ನ ಪ್ರಾಣವನ್ನೇ ಕಳೆದುಕೊಂಡ ಶಿಕ್ಷಕಿ..!: ತಾಯಿಯನ್ನು ಕಳೆದುಕೊಂಡ 4 ವರ್ಷದ ಮಗು..!

ಉಡುಪಿ: ತನ್ನ ಪತಿಯ ಕುಟುಂಬದ ಸಂಬಂಧಿಗೆ ಯಕೃತ್ ದಾನ ಮಾಡಿದ ದಾನಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಕುಂದಾಪುರ ತಾಲೂಕಿನ ಕೊಟೇಶ್ವರದಲ್ಲಿ ನಡೆದಿದೆ.

69 ವರ್ಷ ಹಿರಿಯ ಮಹಿಳೆಗೆ ಯಕೃತ್ತಿನ ಕಸಿ ಅಗತ್ಯವಾಗಿತ್ತು. ಆದರೆ ಕುಟುಂಬದ ಯಾವುದೇ ಇತರ ಸದಸ್ಯರ ರಕ್ತದ ಮಾದರಿ ರೋಗಿಯ ರಕ್ತದ ಮಾದರಿಗೆ ಹೊಂದಾಣಿಕೆಯಾಗಿರಲಿಲ್ಲ. ಕೊನೆಗೆ ಶಿಕ್ಷಕಿ ಅರ್ಚನಾ ಕಾಮತ್ (34)ರವರ ರಕ್ತದ ಮಾದರಿ ಹೊಂದಾಣಿಕೆಯಾಗಿತ್ತು, ಅವರು ತಮ್ಮ ಯಕೃತ್ತಿನ ಭಾಗವನ್ನು ದಾನ ಮಾಡಲು ಒಪ್ಪಿಕೊಂಡಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ 12 ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ನಡೆದಿದ್ದು, ಅರ್ಚನಾ ಅವರ ಯಕೃತ್ತಿನ ಒಂದು ಭಾಗವನ್ನು ಯಶಸ್ವಿಯಾಗಿ ಕಸಿ ಮಾಡಲಾಗಿತ್ತು. ಬಳಿಕ ಅರ್ಚನಾ ಅವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆದರೆ ಕೆಲ ದಿನಗಳ ಬಳಿಕ ಸೋಂಕಿಗೆ ತುತ್ತಾಗಿ ಜ್ವರ ಕಾಣಿಸಿಕೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಶಿಕ್ಷಕಿ ಸೋಂಕಿನಿಂದ ತಮ್ಮ ಜೀವವನ್ನೆ ಕಳೆದುಕೊಂಡಿದ್ದಾರೆ.

ಸದಾ ಸಮಾಜಮುಖಿ ಚಿಂತನೆಯೊಂದಿಗೆ ಸಕ್ರಿಯವಾಗಿದ್ದ ಅರ್ಚನಾ ಕಾಮತ್ ಅವರು ನಗರದ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ಅಕಾಲಿಕ ನಿಧನದಿಂದ ಅರ್ಚನಾ ಅವರ ಸಂಬಂಧಿಕರು, ಆತ್ಮೀಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಮೃತರು ಪತಿ ಸಿಎ ಚೇತನ ಕಾಮತ್, 4 ವರ್ಷದ ಮಗು, ತಂದೆ, ತಾಯಿಯನ್ನು ಅಗಲಿದ್ದಾರೆ.

error: Content is protected !!