ಬೆಳಗ್ಗೆ ಭಯಂಕರ ಬಿಸಿಲು, ಸೂರ್ಯಾಸ್ತ ವೇಳೆ ಮಳೆಯೋ‌ ಮಳೆ…!: ಬಿಸಿಲು ನಂಬಿ ‘ಕೊಡೆ’ ಮರೆತವರಿಗೆ ವರುಣಾಭಿಷೇಕ, ರಸ್ತೆ ಕಾಣದೆ ವಾಹನ ಸವಾರರ ಪರದಾಟ, ಹೊಂಡಕ್ಕೆ ಬಿದ್ದು ಉರುಳಾಟ

 

 

 

ಬೆಳ್ತಂಗಡಿ: ಕಳೆದ 2-3 ವಾರ ಎಡಬಿಡದೆ ಸುರಿದ ಮಳೆ ಎರಡು ದಿನಗಳಿಂದ  ಕೊಂಚ ಬಿಡುವು ನೀಡಿ‌ ಬಿಸಿಲ ತಾಪ ಏರಿಕೆಯಾಗಿತ್ತು. ಆದರೆ ಆ.14ರ ಸಂಜೆ ಒಂದೇ ಸಮನೆ ಸುರಿದ ಮಳೆ ಪೇಟೆಗಳಲ್ಲಿ ಸಾರ್ವಜನಿಕರನ್ನು ಪರದಾಡುವಂತೆ ಮಾಡಿತು.

 

 

 

ಸಂಜೆ ಸುಮಾರು 5 ಗಂಟೆ ವೇಳೆ ಗಾಳಿ ಸಹಿತ ಭಾರೀ ಮಳೆ ಸುರಿದಿದ್ದು ಬಿಸಿಲು ನಂಬಿ ಛತ್ರಿ ಮರೆತು ಬಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಮಳೆಯಲ್ಲೇ ನೆನೆಯುವಂತಾಗಿದೆ. ಮೋಡ ಕವಿದು ಕತ್ತಲಾಗಿ, ಮಳೆಯೂ ಜೋರಾಗಿ ಸುರಿದ ಪರಿಣಾಮ ವಾಹನ ಸವಾರರು ರಸ್ತೆ ಕಾಣದಾಗಿದ್ದರು. ಜೊತೆಗೆ ರಸ್ತೆಯಲ್ಲೇ ಬಾರೀ  ನೀರು ಹರಿದು ಸವಾರರು ಪರದಾಡುವಂತಾಯಿತ್ತಲ್ಲದೇ ರಸ್ತೆಗಳಲ್ಲಿಯ ಹೊಂಡಗಳಿಗೆ ಬೈಕ್ ಸವಾರರು ಬಿದ್ದು ಉರುಳಾಡಿದ ಘಟನೆಗಳೂ ನಡೆದಿದೆ.ಸುಮಾರು ಒಂದು ತಾಸು ಸುರಿದ ಮಳೆ ಸುರಿದಿದ್ದು ನಂತರ ಕೊಂಚ ಕಡಿಮೆಯಾಗಿದೆ. ಹವಾಮಾನ ಇಲಾಖೆಯ ವರದಿ ಪ್ರಕಾರ ಮುಂದಿನ ಒಂದು ವಾರ ಭಾರೀ ಮಳೆಯಾಗುವ ನಿರೀಕ್ಷೆ ಎಂಬ ಮಾಹಿತಿಯನ್ನು ನೀಡಿದೆ.

error: Content is protected !!