ಭಾರೀ ಮಳೆ: ಮುನ್ನೆಚ್ಚರಿಕೆಯಾಗಿ ಆರೆಂಜ್ ಅಲರ್ಟ್ ಘೋಷಣೆ: ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ

ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ವಾರ ಕೊಂಚವೂ ಬಿಡುವು ನೀಡದೆ ಸುರಿದಿದ್ದ ಭಾರೀ ಮಳೆ ಕರಾವಳಿ ಭಾಗಕ್ಕೆ ಈಗ ಬಿಡುವು ಕೊಟ್ಟಿದೆ. ಆದರೆ ಬೆಂಗಳೂರು ನಗರಕ್ಕೆ ಹವಾಮಾನ ಇಲಾಖೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಿದೆ.

ಬೆಂಗಳೂರು ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಜಿಲ್ಲೆಗಳಲ್ಲಿ ಈ ವಾರ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಮುಂದಿನ 5 ದಿನಗಳಿಗೆ ಯೆಲ್ಲೋ ಅಲರ್ಟ್ ಹಾಗೂ ಆಗಸ್ಟ್ 14 ರಂದು ಆರೆಂಜ್ ಅಲರ್ಟ್ ನ್ನು ಹವಾಮಾನ ಇಲಾಖೆ  ನೀಡಿದೆ. ಹೀಗಾಗಿ ಬೆಂಗಳೂರಿನ ವಾಹನ ಸವಾರರು ತಗ್ಗು ರಸ್ತೆಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಎಚ್ಚರದಿಂದ ಇರಬೇಕಾಗಿದೆ ಎಂದಿದೆ.

ಜುಲೈ ಹಾಗೂ ಆಗಸ್ಟ್ ತಿಂಗಳ ಕೆಲ ವಾರದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಿದ್ದ ಭಾರೀ ಮಳೆ ಸದ್ಯ ಇಳಿಕೆಯಾಗಿದ್ದು, ಬಿಸಿಲಿನ ತಾಪ ಕೊಂಚ ಏರಿಕೆಯಾಗಿದೆ.

error: Content is protected !!