ಬೆಂಗಳೂರು: ಮಂಗಳೂರಿನ ಪ್ರಸಿದ್ಧ ಕ್ಯಾನ್ಸರ್ ಆಸ್ಪತ್ರೆ MIO (Mangalore Institute of Oncology) ನಲ್ಲಿ ಎಲ್ಲಾ ರೋಗಿಗಳಿಗೆ ಜಿಲ್ಲಾಸ್ಪತ್ರೆಯ ಮಾನ್ಯತಾ ಪತ್ರ ಇಲ್ಲದೆ ನೇರವಾಗಿ ಚಿಕಿತ್ಸೆಗೆ ದಾಖಲಾತಿಯಾಗುವಂತೆ ಮಾಡಬೇಕು ಎಂದು ಶಾಸಕ ಹರೀಶ್ ಪೂಂಜ ಅಧಿವೇಶನದಲ್ಲಿ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಬಡವರಿಗೋಸ್ಕರ ಯೋಜಿಸಿರುವ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಮಂಗಳೂರಿನ MIO ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವರ ಜಿಲ್ಲಾಸ್ಪತ್ರೆಯ ಮಾನ್ಯತಾ ಪತ್ರ ಇಲ್ಲದೆ ನೇರವಾಗಿ ದಾಖಲಾತಿಯಾಗುವಂತಿಲ್ಲ. ಇದರಿಂದ ರೋಗಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಜಿಲ್ಲಾಸ್ಪತ್ರೆಯ ಮಾನ್ಯತಾ ಪತ್ರ ಇಲ್ಲದೆಯೂ ಆಸ್ಪತ್ರೆಯಲ್ಲಿ ದಾಖಲಾಗುವ ಅವಕಾಶವನ್ನು ರೋಗಿಗಳಿಗೆ ಕಲ್ಪಿಸುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸಿದ್ದಾರೆ.
ಆಯುಷ್ಮನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ 2022 ನೆಯ ಪರಿಷ್ಕೃತ ದರ ಪಟ್ಟಿಯನ್ನು ರಾಜ್ಯ ಸರ್ಕಾರವು ಬೇರೆ ರಾಜ್ಯಗಳ ಮಾದರಿಯಲ್ಲಿ ಅಂಗೀಕರಿಸಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.