ಕೃಷ್ಣ ಜನ್ಮಾಷ್ಟಮಿ ಸಮಿತಿ ಪಡ್ಲಾಡಿ ಲಾಯಿಲ: ಅಧ್ಯಕ್ಷರಾಗಿ ರವಿಚಂದ್ರ ನಾಡೆಂಜ, ಕಾರ್ಯದರ್ಶಿ ಅನಿಲ್ ವಿಕ್ರಂ ಡಿ,ಸೋಜ, ಕೋಶಾಧಿಕಾರಿ ಸಂತೋಷ್ ಸಿಕ್ವೇರಾ ಆಯ್ಕೆ

 

 

ಬೆಳ್ತಂಗಡಿ: ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ಪಡ್ಲಾಡಿ ಲಾಯಿಲ. ಇದರ ವಾರ್ಷಿಕ ಸಭೆಯು ಉತ್ಸಾಹಿ ಯುವಕ ಮಂಡಲ ಪಡ್ಲಾಡಿಯಲ್ಲಿ  ಜುಲೈ 14 ರಂದು  ಸಮಿತಿಯ ಅಧ್ಯಕ್ಷ ಹರ್ಷಿತ್ ನಿನ್ನಿಕಲ್ಲು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

 

 ರವಿಚಂದ್ರ ನಾಡೆಂಜ , ಅಧ್ಯಕ್ಷರು

ಈ ಸಂದರ್ಭದಲ್ಲಿ 2023ನೇ ಸಾಲಿನ ಕಾರ್ಯಕ್ರಮಗಳ ವರದಿಗಳನ್ನು ಕಾರ್ಯದರ್ಶಿ ವಿನಯ್ ಎಂ.ಎಸ್. ಸಭೆಯ ಮುಂದಿಟ್ಟರು, ಜಮಾ ಖರ್ಚು ವಿವರಗಳನ್ನು ಕೋಶಾಧಿಕಾರಿ ಹರೀಶ್ ಎಲ್ ನೀಡಿದರು. ನಂತರ 2024-25ನೇ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

 

 

ಅನಿಲ್ ವಿಕ್ರಂ ಡಿ, ಸೋಜಾ ಕಾರ್ಯದರ್ಶಿ

ಗೌರವಾಧ್ಯಕ್ಷರಾಗಿ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ
ಅಧ್ಯಕ್ಷರಾಗಿ ರವಿಚಂದ್ರ ನಾಡೆಂಜ, ಕಾರ್ಯದರ್ಶಿಯಾಗಿ ಅನಿಲ್ ವಿಕ್ರಂ ಡಿ ಸೋಜ, ಕೋಶಾಧಿಕಾರಿಯಾಗಿ ಸಂತೋಷ್ ಸಿಕ್ವೇರಾ ಹಿಮರಡ್ಡ , ಜೊತೆ ಕಾರ್ಯದರ್ಶಿಯಾಗಿ ಅಕ್ಷಯ್ ನಿನ್ನಿಕಲ್ಲು, ಜೊತೆ ಕೋಶಾಧಿಕಾರಿಯಾಗಿ ಸುರೇಂದ್ರ ಶೆಟ್ಟಿ ಕುಂಡಡ್ಕ ಪುದ್ದೋಟ್ಟು ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

 

ಸಂತೋಷ್ ಸಿಕ್ವೇರಾ ಹಿಮರಡ್ಡ, ಕೋಶಾಧಿಕಾರಿ

ಸಭೆಯಲ್ಲಿ ಆಗಸ್ಟ್ 26 ರಂದು 33 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಪಡ್ಲಾಡಿ ಶಾಲಾ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ ಹಾಗೂ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ನಡೆಸುವ ಬಗ್ಗೆ ತೀರ್ಮಾನಿಸಿ  ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ  ಚರ್ಚಿಸಲಾಯಿತು. ಅಧ್ಯಕ್ಷ ರವಿಚಂದ್ರ ನಾಡೆಂಜ ಎಲ್ಲರ ಸಹಕಾರ ಕೋರಿದರು. ಕೊನೆಯಲ್ಲಿ ಕಾರ್ಯದರ್ಶಿ ಅನಿಲ್ ವಿಕ್ರಂ ಡಿಸೋಜ ಧನ್ಯವಾದವಿತ್ತರು.

 

ಇದನ್ನೂ ಓದಿ:

ಕೃಷ್ಣ ಜನ್ಮಾಷ್ಟಮಿ ಸಮಿತಿ ಪಡ್ಲಾಡಿ ಲಾಯಿಲ: ಅಧ್ಯಕ್ಷರಾಗಿ ಹರ್ಷಿತ್ ನಿನ್ನಿಕಲ್ಲು, ಕಾರ್ಯದರ್ಶಿ ವಿನಯ್, ಕೋಶಾಧಿಕಾರಿ ಹರೀಶ್ ಎಲ್ ಆಯ್ಕೆ:

 

error: Content is protected !!