ಕೊಯ್ಯೂರು: ಹರ್ಪಳದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರವನ್ನು ಪ್ರಜಾಪ್ರಜಾಶ ನ್ಯೂಸ್ ವರದಿಯ ಬೆನ್ನಲ್ಲೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಕಳೆದ 12 ದಿನಗಳ ಹಿಂದೆ ಇಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರ ಕಷ್ಟಕರವಾಗಿತ್ತು. ಈ ಕುರಿತು ಜು.06ರಂದು ಪ್ರಜಾಪ್ರಜಾಶ ನ್ಯೂಸ್ ಈ ಭಾಗದ ಜನರ ಸಂಕಷ್ಟದ ಬಗ್ಗೆ ವರದಿ ಬಿತ್ತರಿಸಿತ್ತು. ಈ ಬೆನ್ನಲ್ಲೆ ಪಂಚಾಯತ್ ಎಚ್ಚೆತ್ತುಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳು ಮರ ತೆರವುಗೊಳಿಸಿದ್ದಾರೆ. ಆದರೆ ಈ ಕೆಲಸ ಕಾಟಾಚಾರಕ್ಕೆ ಮಾಡಿದಂತಾಗಿದೆ.
ಮರದ ದಿಮ್ಮಿಗಳನ್ನು ಅಲ್ಲೇ ಬದಿಗೆ ಸರಿಸಿದ್ದು ಜೊತೆಗೆ ತೊರೆಯಲ್ಲಿ ಬಿದ್ದಿರುವ ಮರದ ದಿಮ್ಮಿಗಳನ್ನು ಅಲ್ಲೆ ಬಿಟ್ಟು ಬಿಡಲಾಗಿದೆ. ಇಲ್ಲಿನ ಸಮಸ್ಯೆಯ ಪರಿಹಾರ ಮೊದಲು ಸೂಚನಾ ಫಲಕಕ್ಕೆ ಸೀಮಿತಗೊಳಿಸಲಾಗಿತ್ತು, ಈಗ ಮರವನ್ನು ಅಲ್ಲಿಂದಲ್ಲಿಗೆ ತೆರವುಗೊಳಿಸಲಾಗಿದೆ.