ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕು: ದ್ವಿಚಕ್ರ ವಾಹನ ಸವಾರರಿಗೆ ಕೆಸರಿನ ಸ್ನಾನ: ಉಜಿರೆಯಲ್ಲಿ ರಸ್ತೆ ಮಧ್ಯೆಯೇ ಕುಳಿತು ಪ್ರತಿಭಟನೆ:

 

 

 

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸದ ಕಾರಣ ಅದಲ್ಲದೇ ಇದ್ದ ಚರಂಡಿಯನ್ನೂ ಮುಚ್ಚಿರುವುದರಿಂದ ರಸ್ತೆಯಲ್ಲೇ ನೀರು ನಿಂತು ಕೆಸರಿನಿಂದಾಗಿ ವಾಹನ ಸಂಚಾರಕ್ಕೆ ತೊಡಕ್ಕಾಗಿದೆ. ದ್ವಿಚಕ್ರ ವಾಹನ ಸವಾರರು ಕೆಸರಿನಲ್ಲಿ ತೆವಳಿಕೊಂಡು ಎದ್ದು ಬಿದ್ದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆಯಲ್ಲದೇ ಬಸ್ ಸೇರಿದಂತೆ ಇತರೇ ವಾಹನ ಸಂಚರಿಸುವಾಗ ಕೆಸರಿನ ಅಭಿಷೇಕದಲ್ಲಿ ಸ್ನಾನ ಮಾಡಿದಂತಾಗುತ್ತಿದೆ.ಅದಲ್ಲದೇ ಅಲ್ಲಲ್ಲಿ ದ್ವಿಚಕ್ರ ಸವಾರರು ನಿಯಂತ್ರಣ ತಪ್ಪಿ ಬೀಳುತಿದ್ದಾರೆ. ಕಳೆದ ವಾರ ಜಿಲ್ಲಾಧಿಕಾರಿ ಬೇಟಿ ನೀಡಿ ಪರಿಶೀಲಿಸಿ ಒಂದು ವಾರದೊಳಗೆ ರಸ್ತೆಯಲ್ಲಿ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಸೂಚಿಸಿದರೂ ಗುತ್ತಿಗೆದಾರರು ಸುಮ್ಮನಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಉಜಿರೆ ಅನುಗ್ರಹ ಶಾಲೆಯ ಬಳಿ ಕೆಸರಿನಲ್ಲಿಯೇ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆದಿದೆ. ಉಜಿರೆಯ ಪ್ರವೀಣ್ ಎಂಬವರು ಮಧ್ಯಾಹ್ನ ನಡು ರಸ್ತೆಯಲ್ಲಿ ಪ್ರತಿಭಟನೆ ಕುಳಿತುಕೊಂಡು ತಕ್ಷಣ ವಾಹನ ಸವಾರರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.ಈಗಾಗಲೇ ಅನುಗ್ರಹ ಶಾಲಾ ಬಳಿ ಕಾಶಿಬೆಟ್ಟು, ಚರ್ಚ್ ರೋಡ್ , ವಾಣಿ ಶಾಲೆ, ಮದ್ದಡ್ಕ, ಮಡಂತ್ಯಾರ್ ಸೇರಿದಂತೆ ಹಲವು ಕಡೆಗಳಲ್ಲಿ ಚರಂಡಿ ಸಮಸ್ಯೆಯಿಂದ ವಾಹನ ಸಂಚಾರ ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ.

error: Content is protected !!