ಕೊಟ್ಟಿಗೆಹಾರ : ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಸರ್ಕಾರಿ ಬಸ್ಸಿಗೆ ಕಾಡಾನೆ ಅಡ್ಡ ಬಂದ ಘಟನೆ ಜೂ. 12ರ ರಾತ್ರಿ ಸಂಭವಿಸಿದೆ.
ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ಕಾಡನೆ ಕಂಡುಬಂದಿದ್ದು ಆನೆಯನ್ನು ಕಂಡ ಬಸ್ ಚಾಲಕ ತಕ್ಷಣ ಬಸ್ ನಿಲ್ಲಿಸಿದ್ದಾರೆ. ಸುಮಾರು ಅರ್ಧ ಗಂಟೆ ಒಂಟಿ ಸಲಗ ರಸ್ತೆಯಲ್ಲೆ ನಿಂತಿದ್ದ ಕಾರಣ ಚಿಕ್ಕಮಗಳೂರು-ಮಂಗಳೂರು ಎರಡೂ ಕಡೆಯಲ್ಲೂ ಎರಡು ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸರ್ಕಾರಿ ಬಸ್ಸಿನ ಪಕ್ಕದಲ್ಲೇ ಕಾಡಾನೆ ಸಂಚರಿಸಿದ್ದು ಸದ್ಯ ಯಾವುದೇ ತೊಂದರೆ ನೀಡಿಲ್ಲ. ಆದರೆ ಕಾಡಾನೆ ಕಂಡು ಪ್ರಯಾಣಿಕರು ಗಾಬರಿಗೊಂಡಿದ್ದರು.
ಕಳೆದ ಎರಡು ತಿಂಗಳಿಂದ ಚಾರ್ಮಾಡಿಯಲ್ಲೇ ಇರೋ ಕಾಡಾನೆ ರಾತ್ರಿ, ಹಗಲು ಇಲ್ಲೇ ಹೆಚ್ಚಾಗಿ ಸಂಚಾರಿಸುತ್ತಿದ್ದು ಕಾಡಾನೆಯನ್ನ ಸ್ಥಳಾಂತರಿಸುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.