ಬೆಳ್ತಂಗಡಿ:ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರ ಎಡವಟ್ಟಿನಿಂದಾಗಿ ಬಡ ಕುಟುಂಬವೊಂದು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ.
ಲಾಯಿಲ ಗ್ರಾಮದ ಕಾಶಿಬೆಟ್ಟು ಎಂಬಲ್ಲಿ ಲಕ್ಷ್ಮೀ ಜೋಗಿ ಎಂಬವರ ಮನೆಯ ಬಳಿ ಕಳೆದ ಮೇ 11 ರ ಶನಿವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಲಾರಿಯೊಂದು
ವಿದ್ಯುತ್ ಕಂಬಕ್ಕೆ ತಾಗಿದ ಪರಿಣಾಮ ಎರಡು ವಿದ್ಯುತ್ ಕಂಬ ಸಹಿತ ಅವರ ಮನೆಗೆ ಅಳವಡಿಸಿದ್ದ ಸರ್ವಿಸ್ ವಯರ್ ಮನೆಯ ಹಂಚು ಸಹಿತ ಕಿತ್ತು ಬಂದಿತ್ತು.
ತಕ್ಷಣ ಮನೆಯವರು ಗುತ್ತಿಗೆದಾರರಲ್ಲಿ ಸರಿ ಪಡಿಸುವಂತೆ ಸೂಚಿಸಿದರೂ ಇವರೆಗೆ ಸರಿಪಡಿಸಿಲ್ಲ. ಎರಡು ದಿನಗಳಿಂದ ಮಳೆಯಾಗುತಿದ್ದು ಇದರಿಂದ ಮನೆಯ ಒಳಗೆ ನೀರು ಬೀಳುತಿದೆಯಲ್ಲದೇ ವಿದ್ಯುತ್ ಉಪಕರಣಗಳು ಒದ್ದೆಯಾಗಿ ಗೋಡೆಯಲ್ಲಿ ಶಾಕ್ ಹೊಡೆಯುತ್ತಿದೆ.
ಕಳೆದ ಎರಡು ದಿನಗಳ ಹಿಂದೆ ಲಾಯಿಲ ಗ್ರಾ.ಪಂ ಸದಸ್ಯರೊಬ್ಬರು ಸಂಬಂಧಪಟ್ಟ ಗುತ್ತಿಗೆದಾರರಲ್ಲಿ ಸರಿ ಪಡಿಸುವಂತೆ ವಿನಂತಿಸಿದರೂ ಉಡಾಫೆಯಾಗಿ ಉತ್ತರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಬಗ್ಗೆ ಮನೆಯವರೊಬ್ಬರು ಪ್ರಜಾಪ್ರಕಾಶ ನ್ಯೂಸ್ ಕಛೇರಿಗೆ ಮಾಹಿತಿ ನೀಡಿ ಕಳೆದ 8 ದಿನಗಳಿಂದ ನಮ್ಮ ಮನೆಯ ಸಮಸ್ಯೆ
ಸರಿ ಪಡಿಸುವಂತೆ ಸೂಚಿಸಿದರೂ ಸ್ಪಂದಿಸಿಲ್ಲ.
ಮುರಿದು ಬಿದ್ದ ವಿದ್ಯುತ್ ಕಂಬ ಬದಲಾಯಿಸಿದ್ದಾರೆ ಅದರೆ ಹಾನಿಯಾದ ಮನೆಯ ವಿದ್ಯುತ್ ಸರಿಪಡಿಸಿಲ್ಲ, ಹಂಚು ತುಂಡಾಗಿ ಗೋಡೆಗೆ ನೀರು ಬೀಳುತ್ತಿದೆ. ಮನೆಯಲ್ಲಿ ಇಬ್ಬರು ಚಿಕ್ಮ ಮಕ್ಕಳು ಹಾಗೂ ವಯಸ್ಸಾದವರು ಸೇರಿದಂತೆ 5 ಮಂದಿ ಇದ್ದೇವೆ ಈ ಮಳೆಗೆ ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದು ತನ್ನ ಅಸಾಹಾಕತೆಯನ್ನು ತೋಡಿಕೊಂಡಿದ್ದಾರೆ. ಬಡ ಕುಟುಂಬ ಇವತ್ತು ಸುರಿಯುತ್ತಿರುವ ಮಳೆಗೆ ಮನೆಯೊಳಗೆ ನೀರು ಬಂದು ಮನೆ ಕುಸಿಯುವ ಭೀತಿ ಎದುರಿಸುತಿದ್ದಾರೆ. ಗುತ್ತಿಗೆದಾರರ ಎಡವಟ್ಟು ಹಾಗೂ ನಿರ್ಲಕ್ಷ್ಯದಿಂದ ಬಡ ಕುಟುಂಬವೊಂದು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ.ತಕ್ಷಣ ಸಂಬಂಧಪಟ್ಟವರು ಗಮನ ಹರಿಸಬೇಕಿದೆ.