ಬೆಳ್ತಂಗಡಿ,ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಹಾಗೂ ವೃತ್ತಕ್ಕೆ ವಸಂತ ಬಂಗೇರ ಹೆಸರು, ಪುತ್ಥಳಿ ನಿರ್ಮಾಣ: ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಮುಖ್ಯಮಂತ್ರಿಗಳಿಗೆ ಮನವಿ:

 

 

ಬೆಳ್ತಂಗಡಿ:ತಾಲೂಕಿನ ಹಿರಿಯ ರಾಜಕಾರಣಿ 5 ಬಾರಿ ಶಾಸಕರಾಗಿ ಕಳೆದ 50 ವರ್ಷಗಳಲ್ಲಿ ಬಡ ಜನರ ಧ್ವನಿಯಾಗಿದ್ದ ದಿವಂಗತ  ವಸಂತ ಬಂಗೇರ ಅವರ ಹೆಸರು ಚಿರಸ್ಥಾಯಿಯಾಗಿರಲು ಕೆ ಎಸ್ ಆರ್ ಟಿ ಸಿ ಹಾಗೂ  ನಗರದಲ್ಲೊಂದು‌ ವೃತ್ತಕ್ಕೆ ವಸಂತ ಬಂಗೇರ ಅವರ ಹೆಸರನ್ನಿಟ್ಟು ಪುತ್ಥಳಿ ನಿರ್ಮಿಸಿವಂತೆ ಕರ್ನಾಟಕದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರಿಗೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮನವಿ ನೀಡುವುದೆಂದು ನಿರ್ಧರಿಸಿದೆ.‌ಮೇ 11 ರಂದು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗಿದೆ.‌ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸ್ಥಾಪನೆಗೆ ಕಾರಣಕರ್ತರು, ಸಂಘದ ವಾಣಿಜ್ಯ ಸಂಕೀರ್ಣದ ರೂವಾರಿ,ಸಂಘದ ಗೌರವಾಧ್ಯಕ್ಷರಾಗಿದ್ದ ವಸಂತ ಬಂಗೇರರ ಹೆಸರಿನಲ್ಲಿ ಬೆಳ್ತಂಗಡಿ ನಗರದಲ್ಲಿ ವೃತ್ತ ನಿರ್ಮಿಸಿ ಅದರಲ್ಲಿ ಅವರ ಪುತ್ಥಳಿ ನಿರ್ಮಿಸಲು ಮತ್ತು ನೂತನವಾಗಿ ನಿರ್ಮಾಣವಾಗುತ್ತಿರುವ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ವಸಂತ ಬಂಗೇರ ಅವರ ಹೆಸರು ಇಡುವಂತೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ನೀಡುವ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ವಸಂತ ಬಂಗೇರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಲಾಯಿತ್ತು ಈ ವೇಳೆ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

error: Content is protected !!