ಒಂದು ವಾರ ಮುಂದುವರಿಯಲಿದೆ ಬಿಸಿ ಗಾಳಿ: ಶೀಘ್ರದಲ್ಲೇ ಮಳೆ ಎಂದರೂ ಕಾಣದಾದ ವರ್ಷಧಾರೆ: ದ.ಕ ಜಿಲ್ಲೆಯಲ್ಲಿ ‘ಎಂಚಿ ಸೆಕೆ ಮರ್ರೆ’ ಡೈಲಾಗ್.!

ಬೆಂಗಳೂರು: ದಿನೇ ದಿನೇ ಬಿಸಿಲಿನ ಶಾಖ ಹೆಚ್ಚಾಗುತ್ತಿದ್ದು ಮತ್ತೆ ಒಂದು ವಾರ ಬಿಸಿಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಸದ್ಯ ಒಂದು ವಾರಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆದ್ರ್ರತೆ ಏರಿಕೆಯಾಗುವ ಸಾಧ್ಯತೆಯಿದೆ ಎಂದಿದೆ.

ಬೆಂಗಳೂರು ಸೇರಿದಂತೆ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ.

ದಕ್ಷಿಣ ಕನ್ನಡ ಜಿಲ್ಲೆಯ ಜನ ಬಿಸಿಲಿನ ಝಳಕ್ಕೆ ಕಂಗಾಲಾಗಿದ್ದಾರೆ. ಮಾತು ಮಾತಿಗೂ ‘ಎಂಚಿ ಸೆಕೆ ಮರ್ರೆ’ ಎನ್ನುತ್ತಿದ್ದಾರೆ. ಕಟ್ಟಡ ಕಾರ್ಮಿಕರು, ಕೂಲಿ ಕಾಮಿಕರು ಬಿಸಿಲಿಗೆ ಹೈರಾಣಾಗಿದ್ದಾರೆ. ಶೀಘ್ರದಲ್ಲಿಯೇ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಕಳೆದೊಂದು ವಾರದಿಂದ ಹೇಳುತ್ತಿದ್ದರೂ, ಮಳೆಯಾಗುವ ಲಕ್ಷಣಗಳು ಇಲ್ಲದಿರುವುದು ಜನ ಜೀವನಕ್ಕೆ ಸಂಕಷ್ಟವನ್ನೇ ತಂದಿಟ್ಟಿದೆ.

error: Content is protected !!