ಓಡೀಲು ಮಹಾಲಿಂಗೇಶ್ವರ ದೇವಸ್ಥಾನ, ವಿಶೇಷ ರಂಗಪೂಜೆ , ಅನ್ನದಾನ ಸೇವೆ: ದೇವಸ್ಥಾನದಲ್ಲಿ ಪವಾಡ ಮೆರೆಯುತ್ತಿರುವ ಅಭಯ ನಂದಿ..!

 

 

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತೀ ಸೋಮವಾರ ರಂಗಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇಂದು ಸಂಜೆ ರಂಗಪೂಜೆ, ಭಜನಾ ಸೇವೆ ಹಾಗೂ ಅನ್ನದಾನ ಸೇವೆ ದೇವಸ್ಥಾನದಲ್ಲಿ ನಡೆಯಲಿದೆ.

 

 

ಎ 07 ರಿಂದ 17 ರವರೆಗೆ ವಿಜೃಂಭಣೆಯಿಂದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಬರೋಡ ಇವರ ನೇತೃತ್ವದಲ್ಲಿ ನಡೆದ ದೇವಸ್ಥಾನದ ಬ್ರಹ್ಮಕಲಶೋತ್ಸವವು ಹಲವಾರೂ ವಿಶೇಷತೆಗಳಿಗೆ ಸಾಕ್ಷಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ದೇವಸ್ಥಾನದ ವಿಶೇಷತೆಯೆಂದರೆ ಅಭಯ ನಂದಿ ಪವಾಡ ತಮ್ಮ ಇಷ್ಟಾರ್ಥ ಬಗ್ಗೆ ನಂದಿಯಲ್ಲಿ ಪ್ರಾರ್ಥಿಸಿದರೆ ಪರಿಹಾರವಾದ ಹಲವಾರೂ ನಿದರ್ಶನಗಳು ಇಲ್ಲಿ ಕಂಡು ಬರುತ್ತಿದೆ.

 

 

ಈ ಬಗ್ಗೆ ಭಕ್ತರೊಬ್ಬರು ಹಲವಾರು ಸಮಯಗಳಿಂದ ಪರಿಹಾರವಾಗದ ಸಮಸ್ಯೆ ಇಲ್ಲಿಗೆ ಭೇಟಿ ನೀಡಿ ಪ್ರಾರ್ಥಿಸಿದ ನಂತರ ಈಡೇರಿದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಈಗಾಗಲೇ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನೇ ಹೆಚ್ಚಾಗುತ್ತಿದ್ದು, ಬರುವ ಭಕ್ತರು ಅಭಯ ನಂದಿಯ ಮೂಲಕ ತಮ್ಮ ಸಂಕಷ್ಟ ಪರಿಹರಿಸುವಂತೆ ಭೇಡಿಕೊಳ್ಳುತಿದ್ದಾರೆ.

error: Content is protected !!