ಕಾಳಿ ನದಿ ಪಾಲಾದ ಒಂದೇ ಮನೆಯ 6 ಜನ : ಅನಾಥವಾದ ಹೊಸ ಮನೆ

ಹುಬ್ಬಳ್ಳಿ: ಪ್ರವಾಸಕ್ಕೆಂದು ಹೋದವರು ಕಾಳಿನದಿ ಪಾಲಾದ ಘಟನೆ ಏ.21ರಂದು ದಾಂಡೇಲಿಯಲ್ಲಿ ಸಂಭವಿಸಿದೆ.

ಈಶ್ವರ ನಗರದಲ್ಲಿ ಕಳೆದ 4 ತಿಂಗಳ ಹಿಂದೆಯಷ್ಟೇ ನಜೀರ್ ಅಹ್ಮದ್ ಕುಟುಂಬಸ್ಥರು ಹೊಸ ಮನೆ ನಿರ್ಮಿಸಿ ವಾಸವಾಗಿದ್ದರು. ನಿನ್ನೆ ರಜಾ ದಿನವಾದ್ದರಿಂದ ನಜೀರ್ ಅಹ್ಮದ್, ಅವರ ಹೆಂಡತಿ ಸಲ್ಮಾ ಹಾಗೂ ತಾಯಿ, ಇಬ್ಬರು ಮಕ್ಕಳಾದ ಅಲ್ಫಿಯಾ, ಮಾಹಿನ್, ನಜೀರ್ ಸಂಬಂಧಿಯಾದ ರೇಷ್ಮಾ ಹಾಗೂ ರೇಷ್ಮಾ ಮಕ್ಕಳಾದ ಇಫ್ರಾ, ಅಭಿದ್ ಒಟ್ಟು 8 ಜನ ಮುಂಜಾನೆ ಟ್ರಿಪ್ ಹೊರಟು ಬಳಿಕ ಕಾಳಿನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದೀಗ ನೂತನ ಮನೆಯಲ್ಲಿ ನೀರವಮೌನ ಆವರಿಸಿದೆ.

ನಜೀರ್ ಅಹ್ಮದ್ ಮೂಲತಃ ಧಾರವಾಡ ಜಿಲ್ಲೆಯ ಹಳ್ಳಿಕೇರಿ ನಿವಾಸಿಯಾಗಿದ್ದು, ಧಾರವಾಡ ಪಾಲಿಕೆಯಲ್ಲಿ ಗುತ್ತಿಗೆ ಕೆಲಸ ಮಾಡುತ್ತ ಸಾಲ ಶೂಲ ಮಾಡಿ ಮನೆ ಕಟ್ಟಿಸಿದ್ದರು. ಕೇವಲ ಮನೆಯಲ್ಲಿ ನಾಲ್ಕು ತಿಂಗಳು ವಾಸವಾಗಿದ್ದರಷ್ಟೆ. ನಿನ್ನೆ ನಡೆದ ದುರಂತದಿಂದ ಇದೀಗ ಮನೆಯೇ ಅನಾಥವಾಗಿದೆ.
ಘಟನೆಯಲ್ಲಿ ನಜೀರ್ ಅಹಮ್ಮದ್ ಹೆಂಡತಿ ಸಲ್ಮಾ ಹಾಗೂ ಅತ್ತೆ ಬದುಕುಳಿದಿದ್ದಾರೆ.

error: Content is protected !!