ಬೆಳ್ತಂಗಡಿಗೆ ಮೂವರು ಶಾಸಕರನ್ನು ನೀಡಿದ ಪ್ರತಿಷ್ಠಿತ ಕೇದೆ ಗುತ್ತಿಗೆ  ಕಾಂಗ್ರೆಸ್  ಲೋಕಸಭಾ ಅಭ್ಯರ್ಥಿ ಭೇಟಿ:  ಕೇದೆ ಗುತ್ತು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪದ್ಮರಾಜ್ ಆರ್.

 

 

 

ಬೆಳ್ತಂಗಡಿ: ತಾಲೂಕಿನ ಪ್ರತಿಷ್ಠಿತ ಗುತ್ತಿನ ಮನೆಯಾದ ಕೇದೆ ಮನೆಗೆ ಲೋಕಸಭಾ ಚುನಾವಣೆಯ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಭೇಟಿ ನೀಡಿದರು.
ಗುತ್ತಿನ ಮನೆಯ ಯಜಮಾನ ಚಂದ್ರಹಾಸ ಕೇದೆ ಅವರು ಪದ್ಮರಾಜ್ ಆರ್. ಅವರ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಾಜಿ ಶಾಸಕ ವಸಂತ ಬಂಗೇರ ಅವರ ತಂದೆ ದಿ. ಕೇದೆ ಸುಬ್ಬ ಪೂಜಾರಿ ಅವರ ಮನೆಯೇ ಕೇದೆ ಮನೆ.
ಬೆಳ್ತಂಗಡಿಗೆ ಮೂವರು ಶಾಸಕರನ್ನು (ಮಾಜಿ ಶಾಸಕರಾದ ಚಿದಾನಂದ ಪೂಜಾರಿ, ಕೆ. ವಸಂತ ಬಂಗೇರ, ಕೆ. ಪ್ರಭಾಕರ ಬಂಗೇರ) ನೀಡಿದ ಪ್ರತಿಷ್ಠಿತ ಬಿಲ್ಲವ ಸಮುದಾಯದ ಕೇದೆ ಗುತ್ತಿನ ಮನೆ ಇದಾಗಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ನಗರ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಗ್ರಾಮೀಣ ಅಧ್ಯಕ್ಷ ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಂದನಾ ಭಂಡಾರಿ, ಕೆಪಿಸಿಸಿ ಮಾಜಿ ಉಪಾಧ್ಯಕ್ಷ ಪೀತಾಂಬರ ಹೇರಾಜೆ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕೊಕ್ಕಡ, ಬೆಳ್ತಂಗಡಿ ಚುನಾವಣಾ ಉಸ್ತುವಾರಿಗಳಾದ ಧರ್ಣೇಂದ್ರ ಕುಮಾರ್, ರಜತ್ ಗೌಡ, ಸುಭಾಶ್ ರೈ, ಮಾಲಾಡಿ ಗ್ರಾಪಂ ಅಧ್ಯಕ್ಷ ಪುನೀತ್ ಕುಮಾರ್ ಮಾಲಾಡಿ, ವೇಣೂರು ಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಎಚ್. ಕೋಟ್ಯಾನ್, ಶೇಖರ್ ಕುಕ್ಯಾಡಿ, ಮನೋಹರ್ ಇಳಂತಿಲ, ಪದ್ಮನಾಭ ಸಾಲ್ಯಾನ್ ಮಾಲಾಡಿ ಸೇರಿದಂತೆ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!