ಕೇಂದ್ರ ಸರ್ಕಾರದ ಮನವಿಗೆ ಆರ್‌ಬಿಐ ಅಸ್ತು: ಮಾ.31ರ ಭಾನುವಾರವೂ ಕಾರ್ಯನಿರ್ವಹಿಸಲಿದೆ ಸರ್ಕಾರಿ ವಹಿವಾಟುಗಳ ಬ್ಯಾಂಕ್

ಮುಂಬೈ: ಮಾರ್ಚ್ 31ರ ಭಾನುವಾರದಂದು ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ದೇಶದ ಎಲ್ಲಾ ಬ್ಯಾಂಕ್‍ಗಳು ಕಾರ್ಯ ನಿರ್ವಹಿಸುವಂತೆ ಆರ್‌ಬಿಐ ನಿರ್ದೇಶನ ನೀಡಿದೆ.

ಮಾರ್ಚ್ ತಿಂಗಳು ಹಣಕಾಸು ವರ್ಷ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಸರ್ಕಾರಿ ವಹಿವಾಟುಗಳನ್ನು ನಿರ್ವಹಿಸುವ ಎಲ್ಲಾ ಬ್ಯಾಂಕ್‍ಗಳು ಕಾರ್ಯನಿರ್ವಹಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು. ಈ ಮನವಿಗೆ ಅಸ್ತು ಎಂದಿರುವ ಆರ್‌ಬಿಐ ತನ್ನ ಅಧೀನದಲ್ಲಿರುವ ಎಲ್ಲಾ ಬ್ಯಾಂಕ್‍ಗಳ ಶಾಖೆಗಳನ್ನು ಮುಕ್ತವಾಗಿಡಲು ಆದೇಶಿಸಿದೆ.

ಮಾ.31ರ ಬ್ಯಾಂಕಿಂಗ್ ಸೇವೆಗಳ ಲಭ್ಯತೆಯ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ.

error: Content is protected !!