ಹಿರಿಯ ಪತ್ರಕರ್ತ ಪ್ರೊ. ನಾ’ವುಜಿರೆ’ಯವರಿಗೆ ನುಡಿ ನಮನ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ

ಬೆಳ್ತಂಗಡಿ: ತಾಲೂಕಿನ ಹಿರಿಯ ಪತ್ರಕರ್ತ ಹಾಗೂ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪ್ರೊ. ನಾ ‘ವುಜಿರೆ’ಯವರಿಗೆ ಇಂದು (ಮಾ.19) ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ಮತ್ತು ನುಡಿ ನಮನ ಸಲ್ಲಿಸಲಾಯಿತು.

ಸಂಘದ ಪದಾಧಿಕಾರಿಗಳು, ಸದಸ್ಯರು ಪ್ರೊ. ನಾ ‘ವುಜಿರೆ’ಯವರಿಗೆ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮೌನ ನಮನ ಸಲ್ಲಿಸಿದರು.

ಸಂಘದ ಮಾಜಿ ಅಧ್ಯಕ್ಷ, ಹಿರಿಯ ಸದಸ್ಯ ಆರ್.ಎನ್.ಪೂವಣಿಯವರು ನಾ’ವುಜಿರೆ’ಯವರ ಜೊತೆಗೆ ಕಳೆದ ದಿನಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು. ಜೊತೆಗೆ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ತಂತ್ರಿ, ಪುಷ್ಪರಾಜ ಶೆಟ್ಟಿ, ಶಿಬಿ ಧರ್ಮಸ್ಥಳ, ಬಿ.ಎಸ್. ಕುಲಾಲ್ ಅವರೊಂದಿಗಿನ ಒಡನಾಟದ ದಿನಗಳನ್ನು ಮೆಲುಕು ಹಾಕಿದರು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಮನೋಹರ್ ಬಳೆಂಜ, ಅಚುಶ್ರೀ ಬಾಂಗೇರು, ಹೃಷಿಕೇಶ್ ಧರ್ಮಸ್ಥಳ, ನಿಕಟಪೂರ್ವ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಎಣಿಂಜೆ, ಮಾಜಿ ಕೋಶಾಧಿಕಾರಿ ತುಕರಾಮ್ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಶಿರ್ಲಾಲು ನಿರೂಪಿಸಿ ವಂದಿಸಿದರು.

error: Content is protected !!