ರಾಜ ಕೇಸರಿ ಟಸ್ಟ್ ಬೆಳ್ತಂಗಡಿ: ನೂತನ ಪದಾಧಿಕಾರಿಗಳ ಆಯ್ಕೆ: ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಸಂದೀಪ್ ಬೆಳ್ತಂಗಡಿ

ಬೆಳ್ತಂಗಡಿ: ರಾಜ ಕೇಸರಿ ಟಸ್ಟ್ ನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟಿನ ಸಂಸ್ಥಾಪಕರದ ದೀಪಕ್ ಜಿ ಬೆಳ್ತಂಗಡಿ ಇವರ ನೇತೃತ್ವದಲ್ಲಿ ಮಾ.18ರಂದು ನಡೆಸಲಾಯಿತು.
ಬೆಳ್ತಂಗಡಿ ತಾಲೂಕು ಅಧ್ಯಕ್ಷರಾಗಿ ಸಂದೀಪ್ ಬೆಳ್ತಂಗಡಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಪ್ರವೀಣ್ ಪಿಂಟೋ ಸೂರ್ಯ ಆಯ್ಕೆಯಾಗಿದ್ದಾರೆ.

ಸಂಘಟನಾ ಕಾರ್ಯದರ್ಶಿಯಾಗಿ ಪ್ರಶಾಂತ್ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಗಣೇಶ್, ಕೋಶಾಧಿಕಾರಿಯಾಗಿ ಸಂತೋಷ್ ಉಜಿರೆ, ಸಂಚಾಲಕರಾಗಿ ಶಶಿಕಾಂತ್ ಗುರುವಾಯನಕೆರೆ, ಸಾಮಾಜಿಕ ಜಾಲತಾಣ ಸಂಪತ್ ರಂಕೆದಗುತ್ತು, ಕ್ರೀಡಾ ಕಾರ್ಯದರ್ಶಿಯಾಗಿ ಕಿಶನ್ ಲಾಯಿಲ ಆಯ್ಕೆಯಾಗಿದ್ದಾರೆ. ಇದೇ ವೇಳೆ ನೂತನ ಸದಸ್ಯರನ್ನು ಟಸ್ಟಿಗೆ ಸೇರ್ಪಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಸಂಘಟನೆಯ ಗೌರವ ಸಲಹೆಗಾರರಾದ ಪ್ರೇಮ್ ರಾಜ್ ರೋಷನ್ ಸ್ವಿಕೆರ ಮತ್ತು ಸದಸ್ಯರುಗಳಾದ ಕಿರಣ್.ವಿಜಯ್ ಕಂಗಿತಿಲು, ಸುಧಾಕರ್, ನಿತೇಶ್, ನಿತಿನ್ ಉಜಿರೆ, ಪ್ರಸಾದ್, ಸಂಪತ್ , ದೇವರಾಜ್, ಅಜಯ್, ಚಂದ್ರ ಶೇಖರ, ಗಣೇಶ್ ಚರ್ಚ್ ರೋಡ್, ಕಾರ್ತಿಕ್, ಮನೋಜ್, ಸುರೇಶ್, ಲೋಹಿತ್, ಹರೀಶ್ ಗೋವಿಂದೂರ್, ಅಜಯ್ ನಾವೂರ , ಚರಣ್, ದಿನೇಶ್, ಉಪಸ್ಥಿತರಿದ್ದರು.

error: Content is protected !!