ಉಜಿರೆ :ಕಡಿದು ಹಾಕಿದ ಮರದ ರಾಶಿಗೆ ಬೆಂಕಿ!

ಬೆಳ್ತಂಗಡಿ: ಉಜಿರೆ ಬಳಿ ಕಡಿದು ಹಾಕಿದ ಮರದ ರಾಶಿಗೆ ಬೆಂಕಿ ಬಿದ್ದಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಉಜಿರೆ ಪೇಟೆಯ ಬಳಿ  ರಸ್ತೆ ಬದಿ ಇದ್ದ ಮರಗಳನ್ನು ತುಂಡರಿಸಿ ರಾಶಿ ಹಾಕಲಾಗಿತ್ತು. ಅದರೆ ಇವತ್ತು ಬೆಳಿಗ್ಗೆ ಮರದ ರಾಶಿಗೆ ಬೆಂಕಿ ಬಿದ್ದಿದ್ದು ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಹೆದ್ದಾರಿ ಅಧಿಕಾರಿಗಳ ಗಮನಕ್ಕೆ ತಂದಾಗ ಅವರು ಸ್ಪಂದಿಸಿ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಬಿದ್ದ ಜಾಗದ ಸಮೀಪವೇ ಅಂಗಡಿಗಳು, ಮನೆ ಇದ್ದು ದೊಡ್ಡ ಅನಾಹುತ ತಪ್ಪಿದಂತಾಗಿದೆ.

error: Content is protected !!