ಕಳಿಯ ಗೋವಿಂದೂರು ಬಳಿ ಗುಡ್ಡಕ್ಕೆ ಬೆಂಕಿ: ಸ್ಥಳೀಯರ ಸಹಕಾರದಲ್ಲಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳ:

 

 

ಬೆಳ್ತಂಗಡಿ: ಕಳಿಯ ಗ್ರಾಮದ ಗೋವಿಂದೂರು ಎಂಬಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು ಹಾನಿಯುಂಟಾಗಿದ್ದು ಸ್ಥಳೀಯರ ಸಹಕಾರದಲ್ಲಿ ಅಗ್ನಿ ಶಾಮಕ ಇಲಾಖೆ ಬೆಂಕಿ ನಂದಿಸಿದ ಘಟನೆ ನಡೆದಿದೆ. ಕಳಿಯ ಗ್ರಾಮದ ಗೊವಿಂದೂರು ಎಂಬಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿಯನ್ನು ಸ್ಥಳೀಯರು ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಲತೀಫ್ ಪರಿಮ ರವರಿಗೆ ತಿಳಿಸಿದರು.ನಂತರ ಗ್ರಾಮ ಪಂಚಾಯತ್ ಸದಸ್ಯರಾದ ಕರೀಮ್ ಗೇರುಕಟ್ಟೆ ರವರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು. ಸ್ಥಳಕ್ಜೆ ಆಗಮಿಸಿದ ಅಗ್ನಿ ಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು
ಸ್ಥಳದಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರೊಂದಿಗೆ ಸ್ಥಳೀಯರಾದ ಲತೀಫ್ ಪರಿಮ ನೇತೃತ್ವದಲ್ಲಿ ಆದರ್ಶ್ ಕೊರೆಯ,ಸಂತೋಷ್ ಮೋರಾಸ್,ಅಝೀಝ್, ಇರ್ಫಾನ್,ಅಬ್ದುಲ್ ರಹಿಮಾನ್,ಸದ್ದಾಂ,ಫಾರೂಕ್, ಇತರರು ಸಹಕರಿಸಿದರು. ಬೆಂಕಿ ನಂದಿಸಲು ಸ್ಪಂದಿಸಿದ ಲತೀಫ್ ರವರನ್ನು ಊರವರು ಪ್ರಶಂಸಿದರು.

error: Content is protected !!