ಕಾರು ಹಾಗೂ ಟ್ರ್ಯಾಕ್ಟರ್ ಮಧ್ಯೆ ಅಪಘಾತ: ಸ್ಥಳದಲ್ಲೇ ಕೊನೆಯುಸಿರೆಳೆದ ನಾಲ್ವರು: ಮದುವೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಘಟನೆ

ತಮಿಳುನಾಡು: ಕಾರು ಹಾಗೂ ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಿರುವಣ್ಣಾಮಲೈ ಬಳಿಯ ಕಿಲ್ಪೆನ್ನತ್ತೂರಿನಲ್ಲಿ ಫೆ.22ರಂದು ಸಂಭವಿಸಿದೆ.

ಕಾರಿನಲ್ಲಿದ್ದ ಪ್ರಯಾಣಿಕರು ತಿರುವಣ್ಣಾಮಲೈನಿಂದ ಕಲ್ಲಾಡಿಗುಂಡಿಗೆ ಮದುವೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಸಾವನ್ನಪ್ಪಿದವರನ್ನು ವಿಲ್ಲುಪುರಂ ಜಿಲ್ಲೆಯ ಕಸ್ಕರ್ಣಿ ಪ್ರದೇಶದ ಅಲಘನ್ (37), ಅವಲೂರ್‍ಪೇಟೆಯ ಪಾಂಡಿಯನ್ (35), ಪ್ರಕಾಶ್ ಹಾಗೂ ಚಿರಂಜೀಜಿ ಎಂದು ಗುರುತಿಸಲಾಗಿದೆ.


ಟ್ರ್ಯಾಕ್ಟರ್ ಚಾಲಕ ಪಾರ್ಕವನಂ ಅವರಿಗೆ ಕೈಗೆ ಗಾಯಗಳಾಗಿದ್ದು, ತಕ್ಷಣ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಪುದುಚೇರಿ ಜಿಪ್ಮಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಅಪಘಾತದ ಕುರಿತು ಕಿಲ್ಪೆನ್ನತ್ತೂರು ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!