ಅಪ್ಪು ಅಭಿಮಾನಿ ಬಳಗ ನರಸಿಂಹಗಡ ಇವರಿಂದ ಮಾನವೀಯ ಕಾರ್ಯ: ಅಪಘಾತದಲ್ಲಿ ಮೃತಪಟ್ಟ ಧರಣೇಂದ್ರ ಮಂಜೊಟ್ಟಿ ಮನೆಯವರಿಗೆ ₹3ಲಕ್ಷ 93 ಸಾವಿರ ಆರ್ಥಿಕ ಸಹಾಯ:

 

 

ಬೆಳ್ತಂಗಡಿ: ಮಂಜೊಟ್ಟಿಯಲ್ಲಿ ಫೆ 04 ರಂದು ಬಸ್ ಡಿಕ್ಕಿ ಹೊಡೆದು ಸಾವನ್ನಪ್ಪಿದ ಮಂಜೊಟ್ಟಿಯ ಅಪ್ಪು ಯಾನೆ ಧರಣೇಂದ್ರ ಪೂಜಾರಿ ಅವರ ಮನೆಯ ಸ್ಥಿತಿ ತೀರಾ ದಯನೀಯವಾಗಿದ್ದು ತಂದೆ ಉಮೇಶ್ ಪೂಜಾರಿ ವಿಶೇಷ ಚೇತನರಾಗಿದ್ದಾರೆ ತಾಯಿ ಕೂಡ ದುಡಿಯಲು ಸಾಧ್ಯವಾಗದ ರೀತಿಯಲ್ಲಿದ್ದಾರೆ. ಈ ಬಗ್ಗೆ ಮನಗಂಡ ಧರಣೇಂದ್ರ ಅವರ ಗೆಳೆಯರು ಅಪ್ಪು ಅಭಿಮಾನಿ ಬಳಗ ನರಸಿಂಹಗಡ ಎಂಬ ವಾಟ್ಸಪ್ ಗ್ರೂಪ್ ರಚಿಸಿ ಆ ಮೂಲಕ ಸುಮಾರು 3 ಲಕ್ಷ 93 ಸಾವಿರ ರೂ ಹಣ ಸಂಗ್ರಹಿಸಿ ಮನೆಯವರಿಗೆ ಹಸ್ತಾಂತರಿಸುವ ಮೂಲಕ ಆಶಕ್ತ ಮನೆಯವರ ಬಾಳಿಗೆ ಬೆಳಕಾಗಿದ್ದಾರೆ. ಸಂಗ್ರಹವಾದ ಹಣವನ್ನು ಫೆ 17 ರಂದು ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ
ಕರುಣಾಕರಗೌಡ ಬೋಜಾರ, ಶುಭಶ್ಚಂದ್ರ, ಹರೀಶ್ ಎನ್.ಬಿ, ನವೀನ್ ಪರಾರಿ, ಕುಶಾಲಪ್ಪ ಒಳಬೈಲು, ಮೋಹನ ಕಂಚೆಲು, ಅರ್ವಿನ್, ಗುರುಪ್ರಸಾದ್, ಆನಂದ್, ಪ್ರವೀಣ್ ಪರಾರಿ, ಸಚಿನ್, ಗಣೇಶ್, ಗುರುರಾಜ್,ಮತ್ತಿತರರು ಇದ್ದರು.

error: Content is protected !!