ಬಾಲಾಪರಾಧಿ ಗೃಹದಲ್ಲಿದ್ದ 22 ಅಪ್ರಾಪ್ತ ಅಪರಾಧಿಗಳು ಪರಾರಿ: 8 ಬಾಲಕರ ವಿರುದ್ಧ ಅತ್ಯಾಚಾರ ಕೇಸ್: 13 ಮಂದಿ ಮೇಲೆ ಕೊಲೆ ಯತ್ನ ಪ್ರಕರಣ..!

ಜೈಪುರ : ಬಾಲಾಪರಾಧಿ ಗೃಹದಲ್ಲಿದ್ದ 22 ಅಪ್ರಾಪ್ತ ಅಪರಾಧಿಗಳು ಕಿಟಕಿಯ ಮೂಲಕ ಪರಾರಿಯಾದ ಘಟನೆ ಫೆ.13ರಂದು ನಸುಕಿ ಜಾವ ಜೈಪುರದ ಸೇಥಿ ಕಾಲೋನಿಯಲ್ಲಿರುವ ಬಾಲಾಪರಾಧಿ ಗೃಹದಲ್ಲಿ ನಡೆದಿದೆ.

ಜೈಪುರದ ಸೇಥಿ ಕಾಲೋನಿಯಲ್ಲಿರುವ ಬಾಲಾಪರಾಧಿ ಗೃಹದಲ್ಲಿ ವಿವಿಧ ಪ್ರಕರಣಗಳಲ್ಲಿ ವಿಚಾರಣೆಗೆ ಒಳಪಟ್ಟಿರುವ ಬಾಲಾಪರಾಧಿಗಳನ್ನು ಇಡಲಾಗಿತ್ತು. ಈ ಪೈಕಿ 8 ಬಾಲಕರ ವಿರುದ್ಧ ಅತ್ಯಾಚಾರ ಕೇಸ್, 13 ಮಂದಿ ಮೇಲೆ ಕೊಲೆ ಯತ್ನದ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಮತ್ತೋರ್ವ ಅಪ್ರಾಪ್ತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು.

22 ಅಪ್ರಾಪ್ತ ಬಾಲಾಪರಾಧಿಗಳು ಜೈಲಿನ ಹಿಂಭಾಗದ ಕಿಟಕಿಯನ್ನು ಕತ್ತರಿಸಿ ಅದರ ಮೂಲಕ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ತಪ್ಪಿಸಿಕೊಂಡ ಅಪರಾಧಿಗಳನ್ನು ಪತ್ತೆ ಮಾಡಲು ಪೊಲೀಸ್ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಏಕಕಾಲಕ್ಕೆ ಇಷ್ಟೊಂದು ಅಪರಾಧಿಗಳು ಬಾಲಾಪರಾಧಿ ಗೃಹದಿಂದ ಪರಾರಿಯಾಗಿರುವುದು ಇದೇ ಮೊದಲಾಗಿದೆ.

ಬಾಲಾಪರಾಧಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಅಡಗುತಾಣಗಳಲ್ಲಿ ಹುಡುಕಾಟ ನಡೆಸಲಾಗಿದೆ. ಈ ಮಧ್ಯೆ ಬಾಲಾಪರಾಧಿ ಗೃಹದ ಸಿಬ್ಬಂದಿಯನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

error: Content is protected !!