ಗುರುವಾಯನಕೆರೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ: ಹೆದ್ದಾರಿಗೆ ಮುರಿದು ಬಿದ್ದ ಕಂಬ,ತಪ್ಪಿದ ಅನಾಹುತ:

 

 

 

 

 

ಬೆಳ್ತಂಗಡಿ:ಗುರುವಾಯನಕೆರೆಯ ಬಳಿ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಫೆ 09 ಬೆಳಗ್ಗೆ ನಡೆದಿದೆ.
ಗುರುವಾಯನಕೆರೆ ಕಾರ್ಕಳ ಹೆದ್ದಾರಿಯ ಕೆರೆಯ ಬಳಿ ಇರುವ ದೊಡ್ಡ ತಿರುವಿನಲ್ಲಿ  ರಸ್ತೆ ಬದಿ ಇದ್ದ ವಿದ್ಯುತ್ ಕಂಬಕ್ಕೆ ಲಾರಿ  ಡಿಕ್ಕಿ ಹೊಡೆದಿದೆ. ವಿದ್ಯುತ್ ಕಂಬ ಹೆದ್ದಾರಿಗೆ ಮುರಿದು ಬಿದ್ದ ಪರಿಣಾಮ ಕೆಲವು ತಾಸು ವಾಹನ ಸಂಚಾರಕ್ಕೆ ತಡೆಯುಂಟಾಯಿತು. ತಕ್ಷಣ ಸ್ಥಳೀಯರು ಮೆಸ್ಕಾಂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು ಅವರು ಬಂದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಡಿಕ್ಕಿ ಹೊಡೆದ ಲಾರಿ ಪರಾರಿಯಾಗಿದೆ. ಒಂದು ವೇಳೆ ಡಿಕ್ಕಿಯ ವೇಳೆ ಬೇರೆ ವಾಹನ ಸಂಚಾರಿಸುತಿದ್ದಲ್ಲಿ ಅಥವಾ ಸಾರ್ವಜನಿಕರು ನಡೆದುಕೊಂಡು ಹೋಗುತಿದ್ದಲ್ಲಿ     ದೊಡ್ಡ ಅನಾಹುತ ಸಂಭವಿಸುತಿತ್ತು ಅದೃಷ್ಟವಶಾತ್ ವಾಹನ ಹಾಗೂ ಜನ ಸಂಚಾರ ಇಲ್ಲದ ಕಾರಣ ದೊಡ್ಡ ಅಪಾಯ ತಪ್ಪಿದಂತಿದೆ. ವಿದ್ಯುತ್ ಕಂಬ ತೆರೆವಿಗೆ ಮೆಸ್ಕಾಂ ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದಾರೆ.

error: Content is protected !!