ಬೆಳ್ತಂಗಡಿ: ಸಮಾಜ ಸೇವೆಯ ಮೂಲಕ ತಾಲೂಕಿನಲ್ಲಿ ವಿಭಿನ್ನ ರೀತಿಯಲ್ಲಿ ಗುರುತಿಸಿಕೊಂಡಿರುವ ದೀಪಕ್ ಜಿ. ಬೆಳ್ತಂಗಡಿ ಸ್ಥಾಪನೆಯ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಘಟಕ ಫೆ.17ರಿಂದ 19ರ ವರೆಗೆ ‘ಬೆಳ್ತಂಗಡಿ ಸಂಭ್ರಮ’ ಕಾರ್ಯಕ್ರಮವನ್ನು ಮಾರಿಗುಡಿ ಮೈದಾನದಲ್ಲಿ ಆಯೋಜಿಸಿದೆ ಎಂದು ರಾಜಕೇಸರಿ ಸಂಘಟನೆಯ ಗೌರವ ಸಲಹೆಗಾರ ಪ್ರೇಮರಾಜ್ ರೊಷನ್ ಸಿಕ್ವೇರ ಹೇಳಿದರು.
ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೇವಾ ಕಾರ್ಯಗಳೊಂದಿಗೆ ಮುನ್ನಡೆಯುತ್ತಿರುವ ರಾಜಕೇಸರಿ ಸಂಘಟನೆ ಇದೀಗ 547ನೇ ಸೇವಾ ಕಾರ್ಯಕ್ರಮದಂಗವಾಗಿ ಪುತ್ತೂರು ಎಸ್‌ಎಸ್ ಈವೆಂಟ್ ಮ್ಯಾನೇಜ್ ಮೆಂಟ್, ಊರುದ ಫೆಸ್ಟ್ ಮಂಗಳೂರು ಸಹಯೋಗದೊಂದಿಗೆ ‘ಬೆಳ್ತಂಗಡಿ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜ.17ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಮೂರ ದಿನಗಳ ಕಾಲ, ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ಈ ಸಂಭ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ 100 ಸ್ಟಾಲ್‌ಗಳಿರಲಿದ್ದು, ಅವುಗಳಲ್ಲಿ 60 ವಿವಿಧ ಬಗೆಯ ಖಾದ್ಯ, ಕೃಷಿ ಮೇಳ, ವಾಹನ ಮೇಳ, ಸಾವಯವ ಉತ್ಪನ್ನ ಮೇಳ ಜರಗಲಿದೆ. ವೇದಿಕೆಯಲ್ಲಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಜ.18ರಂದು ರವಿವಾರ ತಾಲೂಕಿನ ಶಿಕ್ಷಕರಿಗೆ ಮನೋರಂಜನಾ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸ್ಟಾಲ್ ಅಳವಡಿಸಲು ಬೆಳ್ತಂಗಡಿಯವರಿಗೆ ಮೊದಲ ಆದ್ಯತೆ ನೀಡಲಾಗಿದ್ದು ಸಂಘಟನೆಯವರನ್ನು ಸಂಪರ್ಕಿಸಬಹುದಾಗಿದೆ.
ಕಾರ್ಯಕ್ರಮದಿಂದ ಬಂದ ಆದಾಯದಲ್ಲಿ 547ನೇ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ, ಆಯೋಜಕರಾದ ಶಿವಪ್ರಸಾದ್ , ಅಚಲ್ ವಿಟ್ಲ ಉಪಸ್ಥಿತರಿದ್ದರು.