ಸ್ಪಂದನ ಬಂಟರ ಸೇವಾ ತಂಡ ಬೆಳ್ತಂಗಡಿ: ಬಂಟರ ಭವನದಲ್ಲಿ 25 ನೇ ಸೇವಾ ಕಾರ್ಯಕ್ರಮ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ನೆರವು: ತಂಡವನ್ನು ಅಭಿನಂದಿಸಿದ ಶಾಸಕ ಹರೀಶ್ ಪೂಂಜ, ಉದ್ಯಮಿ ಶಶಿಧರ ಶೆಟ್ಟಿ

ಬೆಳ್ತಂಗಡಿ: ಸ್ಪಂದನ ಬಂಟರ ಸೇವಾ ತಂಡ ಬೆಳ್ತಂಗಡಿ ಇದರ 25 ನೇ ಸೇವಾ ಕಾರ್ಯಕ್ರಮವು ಜ.15ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ಸಮಾಜದ ಕಟ್ಟಕಡೆಯ ಅಶಕ್ತ ವ್ಯಕ್ತಿಗಳನ್ನು ಗುರುತಿಸಿ ಅವರ ಸಮಸ್ಯೆಗೆ ಸ್ಪಂದಿಸಿದ ‘ಸ್ಪಂದನ ಬಂಟರ ಸೇವಾ ತಂಡದ’ 25ನೇ ಸೇವಾ ಯೋಜನೆಯ ಈ ಕಾರ್ಯಕ್ರಮ ಎಲ್ಲರಿಗೂ ಪ್ರೇರಣದಾಯಕ.

ಕೊರೋನಾ ಸಂದರ್ಭದಲ್ಲಿ ಬಂಟ ಸಮಾಜದ ಬಂಧುಗಳ ಸಮಸ್ಯೆಗೆ ಸ್ಪಂದಿಸಬೇಕು ಎಂಬ ಉದ್ದೇಶದಿಂದ ಎಲ್ಲರಿಗೂ ಪ್ರೇರಕರಾಗಿರುವ ಉದ್ಯಮಿ ಶಶಿಧರ ಶೆಟ್ಟಿ ಗೌರವಾಧ್ಯಕ್ಷತೆಯಲ್ಲಿ ಸ್ಪಂದನ ಬಂಟರ ಸೇವಾ ತಂಡ ಆರಂಭವಾಯಿತು. ಆದರೆ ಇಂದು ಕೇವಲ ಒಂದೇ ಸಮುದಾಯದಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯದ ಕಷ್ಟಕ್ಕೂ ಸ್ಪಂದಿಸುತ್ತೇವೆ ಎನ್ನುವ ಮೂಲಕ ನಾವು ಎಲ್ಲರೂ ಹಿಂದೂ ಸಮುದಾಯದವರು ಎಂಬ ಪರಿಕಲ್ಪನೆಯನ್ನು ವ್ಯಕ್ತಪಡಿಸಿದೆ. ಈ ಕಾರಣಕ್ಕಾಗಿ ಸ್ಪಂದನ ಬಂಟರ ಸೇವಾ ತಂಡದವನ್ನು ನಾನು ಮನದುಂಬಿ ಅಭಿನಂದಿಸುತ್ತೇನೆ. ಇನ್ನಷ್ಟು ಇಂತಹ ಕಾರ್ಯಕ್ರಮ ನಡೆಯಲಿ. ಅಶಕ್ತ ಬಂಧುಗಳಿಗೆ ನೆರವಾಗುವ ಶಕ್ತಿ ಭಗವಂತ ನೀಡಲಿ. ನನ್ನಿಂದಾಗುವ ನೆರವನ್ನು ಖಂಡಿತವಾಗಿಯೂ ನಾನು ನೀಡುತ್ತೇನೆ ಎಂದು ಭರವಸೆ ನೀಡಿದರು.

ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಮಾತನಾಡಿ ಬಡತನ ನಮಗೆ ವರ. ಆ ಬಡತನದಿಂದ ನಾವು ಹೊರಬರುವ ಬಗ್ಗೆ ಯೋಚಿಸಬೇಕು. ನಾವು ಕೂಡ ಬಡತನದಲ್ಲಿ ಬೆಂದು ಬಂದವರು. ಬಂಟ ಸಮಾಜದ ಕಾರ್ಯಕ್ರಮಗಳ ಜೊತೆ ನಾನು ಯಾವಾಗಲೂ ಇರುತ್ತೇನೆ. ಎಲ್ಲಾ ಸಮುದಾಯವನ್ನು ಒಂದೇ ಭಾವನೆಯಲ್ಲಿ ನೋಡೋಣ. ತಾಲೂಕಿನಲ್ಲಿ ಸ್ಪಂದನ ಒಂದು ಒಳ್ಳೆ ಸಂಸ್ಥೆಯಾಗಬೇಕು. ಮುಂದೆ ಹತ್ತು ಪಟ್ಟು ಸಹಾಯ ನೀಡುವ ಕಾರ್ಯಕ್ರಮ ನಡೆಯಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿಗುತ್ತು, ಬಂಟರ ಗ್ರಾಮ ಸಮಿತಿ ಲಾಯಿಲ ಅಧ್ಯಕ್ಷ ಜನಾರ್ಧನ ಶೆಟ್ಟಿ ಪೆರಿಂದಿಲೆ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 25 ಅಶಕ್ತ ಕುಟುಂಬಗಳಿಗೆ ತಲಾ 10000 ದಂತೆ 2.50 ಲಕ್ಷ ರೂಗಳನ್ನು ವಿತರಿಸಲಾಯಿತು.

ಸ್ಪಂದನಾ ಸೇವಾ ತಂಡದ ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಸುರೇಶ್ ಶೆಟ್ಟಿ ಪಾಲ್ತ್ಯಾರ್ ಸ್ಪಂದನಾ ಸೇವಾ ಯೋಜನೆಗಳ ವಿವರಗಳನ್ನು ನೀಡಿದರು. ಕಿರಣ್ ಶೆಟ್ಟಿ ವಂದಿಸಿ, ಪ್ರಕಾಶ್ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರೂಪಿಸಿದರು.

error: Content is protected !!