ಕಲಿತ ವಿದ್ಯೆಗೆ ತಕ್ಕ ಉದ್ಯೋಗವಿಲ್ಲದೆ ಬೇಸತ್ತ ಇಂಜಿನಿಯರ್‌ ಯುವಕ : ಕುತ್ತಿಗೆಗೆ ಚಾಕು ಇರಿದುಕೊಂಡು ಆತ್ಮಹತ್ಯೆ ಯತ್ನ: ಧರ್ಮಸ್ಥಳ ಪೊಲೀಸರ ಸಮಯಪ್ರಜ್ಞೆಯಿಂದ ಅಪಾಯದಿಂದ ಪಾರು:

 

 

 

ಬೆಳ್ತಂಗಡಿ : ಇಂಜಿನಿಯರಿಂಗ್ ಕಲಿತು ಕೆಲಸ ಸಿಗದೇ ನಿರುದ್ಯೋಗದಲ್ಲಿದ್ದ  ಯುವಕನೊಬ್ಬ ಮನನೊಂದು   ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ಜ.6 ರಂದು ಕುತ್ತಿಗೆಗೆ ಚೂರಿ ಇರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸಾರ್ವಜನಿಕರ ಹಾಗೂ ಧರ್ಮಸ್ಥಳ ಪೊಲೀಸರ ಸಮಯ ಪ್ರಜ್ಞೆಯಿಂದ ಯುವಕನನ್ನು ರಕ್ಷಣೆ ಮಾಡಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಬೆಂಗಳೂರಿನ ಮಾದಾವರ ನಿವಾಸಿ ನಾರಾಯಣಪ್ಪ ಎಂಬವರ  ಮಗ ಹಿತೇಶ್ (24) ಎಂಬಾತ ಎನ್.ಕೆ.ಐ.ಡಿ ಯಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದ‌. ವಿದ್ಯಾಭ್ಯಾಸ ಮಾಡಿದ ಬಳಿಕ ಎಷ್ಟೇ ಕೆಲಸ ಹುಡುಕಿದರೂ ಒಂದು ವರ್ಷದವರೆಗೂ ಕೆಲಸ ಸಿಗದೆ. 2022 ರಲ್ಲಿ ಆರು ತಿಂಗಳ ಐಟಿ ಕೋರ್ಸ್ ಮಾಡಿದ್ದು. ಇದರಿಂದ ಐ.ಎನ್.ಸಿ ಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದ‌. ಆದರೆ ಆ ಕೆಲಸದಲ್ಲಿ ತೃಪ್ತಿ ಇರದೆ. ಸಂಬಳ ಸಾಲುತ್ತಿರಲ್ಲಿಲ್ಲ ಮತ್ತು ಹಣವನ್ನು ಕಳೆದುಕೊಂಡಿದ್ದ.ಆದ್ದರಿಂದ ಬೆಸತ್ತು‌ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಸ್ ಮೂಲಕ ಜ.6 ರಂದು ಬೆಳಗ್ಗೆ ಬಂದು ಧರ್ಮಸ್ಥಳ – ಕೊಕ್ಕಡ ರಸ್ತೆಯ ಕಲ್ಲೇರಿ ಪೆಟ್ರೋಲ್ ಪಂಪ್ ಬಳಿಯ ರಸ್ತೆ ಪಕ್ಕದಲ್ಲಿ ಹೋಗಿ ಬ್ಯಾಗ್ ನಲ್ಲಿ ತಂದಿದ್ದ ಚೂರಿಯಿಂದ ಕುತ್ತಿಗೆಯನ್ನು ಇರಿದುಕೊಂಡು ರಕ್ತ ಸ್ರಾವದಿಂದ ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್‌ ಕುಮಾರ್ ಮತ್ತು ಸಿಬ್ಬಂದಿ ಮಂಜುನಾಥ್ ,ಗೋವಿಂದಾ ರಾಜ್ , ಪ್ರಶಾಂತ್ ಬಂದು ಆಂಬುಲೆನ್ಸ್ ಗೆ ಕರೆ ಮಾಡಿದಾಗ ಸಕಾಲಕ್ಕೆ ಬರದೆ ಇದ್ದಾಗ ಜೀವ ಉಳಿಸಲು ಪೊಲೀಸ್ ಜೀಪ್ ನಲ್ಲಿ ಕೂರಿಸಿಕೊಂಡು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಹಿತೇಶ್ ಕುತ್ತಿಗೆ ಭಾಗಕ್ಕೆ ಚೂರಿಯಿಂದ ಇರಿದುಕೊಂಡ ಗಾಯವಾಗಿದ್ದು‌‌. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರಿಂದ ಪ್ರಾಣಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

error: Content is protected !!