ರಾಮನ ಪೂಜಾ ಸಾಮಾಗ್ರಿ ತಯಾರಿ, ದಲಿತ ಸಮುದಾಯಕ್ಕೆ ಅವಕಾಶ: ರಾಮನ ಸೇವೆಗೆ ಅವಕಾಶ ಸಿಕ್ಕಿದ್ದೇ ಅದೃಷ್ಟ ಎಂದ ಕುಶಲಕರ್ಮಿ:

 

 

ದೆಹಲಿ :ಆಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತಿದ್ದು ಜ 22 ರಂದು ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದೇಶಾದ್ಯಂತ ಜನರು ಕಾತರದಿಂದ ಕಾಯುತಿದ್ದು ಈ ಅಭೂತಪೂರ್ವ ಕಾರ್ಯಕ್ರಮವನ್ನು ಸರ್ವಧರ್ಮದ ನೆಲೆಯನ್ನಾಗಿ ಮಾಡಲು ರಾಮ ಮಂದಿರ ನಿರ್ಮಾಣ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದೇಶದ ವಿವಿಧೆಡೆಗಳಿಂದ ಎಲ್ಲಾ ಸಮಾಜದ ಕೊಡುಗೆಗಳನ್ನು ಪಡೆಯಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಯೋಚಿಸಿದೆ. ಜನವರಿ 22 ರಂದು ನಡೆಯುವ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ದಲಿತ ಸಮುದಾಯದ ವ್ಯಕ್ತಿಗೆ ಪೂಜಾ ಸಾಮಗ್ರಿಗಳನ್ನು ತಯಾರಿಸಲು ಅವಕಾಶ ನೀಡಲಾಗಿದೆ.

ಉತ್ತರಪ್ರದೇಶದ ವಾರಣಾಸಿಯ ಕಾಸೆರಾ ಸಮುದಾಯ (ದಲಿತ) ಕುಶಲಕರ್ಮಿಗೆ ಪೂಜಾ ಸಾಮಗ್ರಿಗಳಾದ ನೀರಿನ ಪಾತ್ರೆಗಳು, ಕಮಂಡಲಗಳು (ಉದ್ದವಾದ ನೀರಿನ ಮಡಕೆ), ಪೂಜೆ ತಾಲಿಗಳು ಮತ್ತು ಶೃಂಗಿಗಳನ್ನು (ಶಿವಲಿಂಗದ ಮೇಲೆ ನೀರನ್ನು ಸುರಿಯುವ ಪಾತ್ರೆ) ತಯಾರಿಸಿಕೊಡಲು ಸೂಚಿಸಲಾಗಿದೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅವುಗಳನ್ನು ನೀಡಲು ಕುಶಲಕರ್ಮಿಗೆ ತಿಳಿಸಲಾಗಿದೆ.

ಅವಕಾಶ ಸಿಕ್ಕಿದ್ದೇ ಅದೃಷ್ಟ:

ಕಾರ್ಯಕ್ರಮಕ್ಕಾಗಿ 121 ಸೆಟ್​ಗಳ ಪೂಜಾ ಪರಿಕರಗಳನ್ನು ತಯಾರಿಸಿಕೊಡಲು ಹೇಳಲಾಗಿದೆ. ನೀರಿನ ಪಾತ್ರೆಗಳು, ಕಮಂಡಲಗಳು, ಪೂಜಾ ತಾಲಿಗಳು ಮತ್ತು ಶೃಂಗಿಗಳನ್ನು ತಯಾರಿಸಲಾಗುತ್ತಿದೆ. ವಿಶ್ವವೇ ಕಾಯುತ್ತಿರುವ ಕಾರ್ಯಕ್ರಮದಲ್ಲಿ ತಾವು ಭಾಗವಾಗಿರಲು ಅವಕಾಶ ಸಿಕ್ಕಿದೆ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಕುಶಲಕರ್ಮಿ ಲಾಲು ವರ್ಮಾ ಅವರು ತಿಳಿಸಿದರು.

35 ವರ್ಷಗಳಿಂದ ಕುಂಬಾರಿಕೆ ಕೆಲಸ ಮಾಡುತ್ತಿದ್ದೇವೆ. ಭಗವಾನ್ ಶ್ರೀರಾಮನಿಗಾಗಿ ಕೆಲಸ ಮಾಡುವ ಅವಕಾಶವನ್ನು ಪಡೆದಿರುವುದು ನಮ್ಮ ಅದೃಷ್ಟವಾಗಿದೆ. ಈ ಜನ್ಮದಲ್ಲಿ ನನಗೆ ಮಂದಿರದ ದರ್ಶನ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಪೂಜಾ ಸಾಮಗ್ರಿಗಳನ್ನು ತಯಾರಿಸುವುದು ನನ್ನ ಕನಸಾಗಿದೆ. ಭಗವಂತನ ಸೇವೆ ಮಾಡುವುದೇ ಅದೃಷ್ಟ. ಅದಕ್ಕಾಗಿ ಬೆಳ್ಳಿಯ ಸಾಮಗ್ರಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ಜನವರಿ 15 ರ ಮೊದಲು ಪೂಜಾ ಪರಿಕರಗಳನ್ನು ನೀಡಲು ವರ್ಮಾ ಅವರಿಗೆ ಸೂಚಿಸಲಾಗಿದೆ. ವಾರಣಾಸಿಯ ಕಾಶಿಪುರ್ ಪ್ರದೇಶದಲ್ಲಿ ಪ್ರಬಲವಾಗಿರುವ ಕಾಸೆರಾ ಸಮುದಾಯವು ತಲೆಮಾರುಗಳಿಂದ ಹಿತ್ತಾಳೆ, ಬೆಳ್ಳಿ, ತಾಮ್ರ ಮತ್ತು ಬೆಳ್ಳಿಯ ಪೂಜಾ ಪಾತ್ರೆಗಳನ್ನು ನಿರ್ಮಿಸುವಲ್ಲಿ ಪ್ರಾವಿಣ್ಯತೆ ಪಡೆದಿದೆ.

error: Content is protected !!