ಪ್ರಜಾಪ್ರಕಾಶ ನ್ಯೂಸ್ ವರದಿಗೆ ಪಟ್ಟಣ ಪಂಚಾಯತ್ ಸ್ಪಂದನೆ: ಮೂರು ಮಾರ್ಗದ ಬಳಿಯ ಅಪಾಯಕಾರಿ ಕಟ್ಟಡದ ಗೋಡೆ ತೆರವು:

 

 

ಬೆಳ್ತಂಗಡಿ:ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೂರು ಮಾರ್ಗದ ಬಳಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕುಸಿದು ಬಿದ್ದ ಅಂಗಡಿ ಕಟ್ಟಡದ ಶಟ್ಟರ್ ಸಹಿತ ಗೋಡೆಗಳು ಹಾಗೆಯೇ ಇದ್ದು ಅದು ಹೆದ್ದಾರಿಗೆ ವಾಲಿ ಕುಸಿದು ಬೀಳುವ ಅಪಾಯಕಾರಿ ರೀತಿಯಲ್ಲಿ ಇತ್ತು. ಅದರ ಬದಿಯಲ್ಲಿಯೇ ನೂರಾರು ಮಂದಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ನಡೆದುಕೊಂಡು ದಿನನಿತ್ಯ ಹೋಗುತ್ತಾರೆ. ಒಂದು ವೇಳೆ ಈ ಗೋಡೆ ಕುಸಿದು ರಸ್ತೆಗೆ ಉರುಳಿ ಬೀಳುತಿದ್ದರೆ ದೊಡ್ಡ ಅನಾಹುತವಾಗುವ ಸಂಭವ ಇರುವ ಬಗ್ಗೆ “ಪ್ರಜಾಪ್ರಕಾಶ ನ್ಯೂಸ್” ವಿಸ್ಕ್ರತ ವರದಿಯೊಂದನ್ನು ಡಿ 22 ರಂದು ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಈ ಬಗ್ಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸ್ಪಂದಿಸಿ ಕಟ್ಟಡದ ಮಾಲಕರಿಗೆ ತಕ್ಷಣ ಕಟ್ಟಡ ತೆರವುಗೊಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಕಟ್ಟಡದ ಅವಶೇಷಗಳನ್ನು ಕಟ್ಟಡದ ಮಾಲಕರು ತೆರವುಗೊಳಿಸಿದ್ದಾರೆ.ಕಟ್ಟಡದ ಅಪಾಯಕಾರಿ ಗೋಡೆ ತೆರವುಗೊಂಡಿರುವುದರಿಂದ ಸಾರ್ವಜನಕರು ನಿರ್ಭೀತಿಯಿಂದ ಸಂಚಾರಿಸುವಂತಾಗಿದೆ.

 

ಇದನ್ನೂ ಓದಿ:

 

ಬೆಳ್ತಂಗಡಿ: ಹೆದ್ದಾರಿ ಬದಿಯಲ್ಲಿದೆ ಡೇಂಜರ್ ಗೋಡೆ..! ಪಾದಾಚಾರಿಗಳ ಮೇಲೆ ಬಿದ್ದರೆ ಪ್ರಾಣಕ್ಕೆ ಸಂಚಕಾರ..! ಇತ್ತ ಗಮನ ಹರಿಸಬೇಕಾಗಿದೆ ಅಧಿಕಾರಿಗಳು..

 

error: Content is protected !!