9 ದಿನ ಬೆಂಗಳೂರು- ಮಂಗಳೂರು ರೈಲು ಸಂಚಾರ ರದ್ದು: ನೈರುತ್ಯ ರೈಲ್ವೆ ಇಲಾಖೆಯಿಂದ ಮಾಹಿತಿ

ಬೆಂಗಳೂರು: ಡಿ.14ರಿಂದ 22ರವರೆಗೆ ಬೆಂಗಳೂರು ಮತ್ತು ಮಂಗಳೂರಿನ ನಡುವಿನ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುವುದು ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಇಂಟರ್ ಲಾಕಿಂಗ್ ಹಾಗೂ ಪುನರ್ ನಿರ್ಮಾಣ ಕಾಮಗಾರಿ ಹಿನ್ನೆಲೆ ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಈ ಕುರಿತು ಪ್ರಕಟಣೆ ನೀಡಿದ್ದಾರೆ.

ಹಾಸನ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಯಾರ್ಡ್ ಮರುನಿರ್ಮಾಣಕ್ಕೆ ಅನುಕೂಲವಾಗಲು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದ್ದು, ಡಿ.14ರಿಂದ 18ರವರೆಗೆ ಪೂರ್ವ ಇಂಟರ್ ಲಾಕಿಂಗ್ ಮತ್ತು ಡಿ.19 ರಿಂದ 22 ರವರೆಗೆ ಪುನರ್ ನಿರ್ಮಾಣ ಕಾಮಗಾರಿಗಾಗಿ ಹಾಸನ ಯಾರ್ಡ್ ನಲ್ಲಿ ನಾನ್-ಇಂಟರ್ ಲಾಕಿಂಗ್ ಗೆ ಅನುಮೋದನೆಯನ್ನು ನೀಡಲಾಗಿದೆ. ನೈರುತ್ಯ ರೈಲ್ವೆಯು ಅರಸೀಕೆರೆ, ನೆಲಮಂಗಲ, ಮೈಸೂರು ಮತ್ತು ಮಂಗಳೂರುಗಳಲ್ಲಿ ರೈಲು ಸಮರ್ಥವಾಗಿ ಸಂಚಾರ ನಡೆಸಲು ಸ್ಟ್ಯಾಂಡರ್ಡ್ ಇಂಟರ್ ಲಾಕಿಂಗ್ ನ್ನು ನವೀಕರಿಸಲಾಗುತ್ತಿದೆ.

ಡಿ. 14 ರಿಂದ 18 ರ ಅವಧಿಯಲ್ಲಿ ಈ ಕಾಮಗಾರಿಯು ಮಧ್ಯಾಹ್ನ 2 ಗಂಟೆಯಿAದ ಸಂಜೆ 6 ಗಂಟೆಯವರೆಗೆ ಮತ್ತು ಸಂಜೆ 6ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದ್ದು ಈ ಕಾರಣದಿಂದ ಲೈನ್ ಬ್ಲಾಕ್, ಸಿಗ್ನಲ್ ಮತ್ತು ದೂರಸಂಪರ್ಕ ಬ್ಲಾಕ್ ಜಾರಿಯಾಗಲಿದೆ. ಈ ಸಮಯದಲ್ಲಿ ರೈಲು ಕಾರ್ಯಚರಣೆ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ರದ್ದುಗೊಂಡ ರೈಲು ಸೇವೆಗಳು..

ಡಿ.16 ರಿಂದ 20 ರವರೆಗೆ ಬೆಂಗಳೂರು-ಕಣ್ಣೂರು-ಬೆಂಗಳೂರು ಪಂಚಗಂಗಾ ಎಕ್ಸ್ ಪ್ರೆಸ್ ರಾತ್ರಿಯ ಸೇವೆಗಳು ರದ್ದು

ಡಿ.16 ರಿಂದ 20 ರವರೆಗೆ ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್ ಪ್ರೆಸ್ ರಾತ್ರಿಯ ಸೇವೆಗಳು ರದ್ದು
ಡಿ.14, 17, 19 ಮತ್ತು 21 ರಂದು ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರದ್ದು
ಡಿ.13, 15, 18, 20 ಮತ್ತು 22 ರಂದು ಯಶವಂತಪುರ-ಕಾರವಾರ ತ್ರಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ರದ್ದು

ಡಿ.16 ರಂದು ಯಶವಂತಪುರ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16539 ರದ್ದು

ಡಿ.17 ರಂದು ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್ ಪ್ರೆಸ್ಸ್(ರೈಲು ಸಂಖೆ 16540) ರದ್ದು

error: Content is protected !!