ಬೆಳ್ತಂಗಡಿ : ಕುಟುಂಬವೊಂದು ಉಜಿರೆ ಶಾಪಿಂಗ್ ಮಾಡಿ ವಾಪಸ್ ಮನೆಗೆ ಹೋಗುವ ವೇಳೆ ಒಂಟಿ ಸಲಗವೊಂದು ಕಾರಿನ ಮೇಲೆ ದಾಳಿ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನ.27 ರಂದು ರಾತ್ರಿ 8:30 ರ ಸಮಯಕ್ಕೆ ನಡೆದಿದೆ.
ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಮನೆಯ ಅಬ್ದುಲ್ ರಹಮಾನ್(40) ತಲೆಗೆ ಹಾಗೂ ಎಡಕಾಲು ಮುರಿದಿದ್ದು. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಹಿಟ್ಟಾಡಿ ಮನೆಯ ಅಬ್ದುಲ್ ರಹಮಾನ್ ಪತ್ನಿಯ ತಂಗಿ ನಾಸಿಯಾ(30) ಎಡಕಾಲು ಮುರಿದಿದ್ದು. ಕಕ್ಕಿಂಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಕಾರಿನಲ್ಲಿ ಅಬ್ದುಲ್ ರಹಮಾನ್ (40) ಪತ್ನಿ ಫೌಸಿಯಾ(35) , ನಾಸಿಯಾ ತಾಯಿ ಜುಬೈದಾ (50), ನಾಸಿಯಾ ಚಿಕ್ಕಮ್ಮ ಅಯಿಷಾ (45), ನಾಸಿಯಾ ಮಕ್ಕಳಾದ ಫಾತಿಮಾ ಅಲ್ಫಾ(1) , ಅಯಿಷಾ ವಾಫಾ(4) ,ಅಬ್ದುಲ್ ರಹಮಾನ್ ಮಗಳು ಮಹಮ್ಮದ್ ಮೋಹಜ್(4) ಸೇರಿ ಒಟ್ಟು 7 ಜನರು ಇದ್ದವರು ಎಂದು ಗಾಯಗೊಂಡ ಅಬ್ದುಲ್ ರಹಮಾನ್ ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ನೆರಿಯ ಪತ್ನಿ ಮನೆಗೆ ಹೋಗಿ ಉಜಿರೆ ಶಾಪಿಂಗ್ ಮುಗಿಸಿಕೊಂಡು ರಾತ್ರಿ ನೆರಿಯ ಪತ್ನಿ ಮನೆಗೆ ಹೋಗುವಾಗ ಒಂಟಿ ಸಲಗ ಕಂಡಿದ್ದು ತಕ್ಷಣ ಕಾರನ್ನು ಬಯಲು ಎಂಬಲ್ಲಿ ಕಟ್ಟಡವೊಂದರ ಬಳಿ ನಿಲ್ಲಿಸಿ ಎಲ್ಲರೂ ಇಳಿದು ಹೋಗುವಷ್ಟರಲ್ಲಿ ಆನೆ ಕಾರಿನತ್ತ ಧಾವಿಸಿ ಬಂದು ದಾಳಿ ಮಾಡಿ ಕಾರನ್ನು ಪಲ್ಟಿ ಮಾಡಿದೆ. ಈ ವೇಳೆ ಕಾರಿನಲ್ಲಿದ್ದವರು ಅದೃಷ್ಟವಶಾತ್ ತಪ್ಪಿಸಿಕೊಂಡಿದ್ದಾರೆ ಆನೆಯು ದಂತದಿಂದ ಕಾರಿನ ಡೋರ್ ಗೆ ತಿವಿದ ಪರಿಣಾಮ ಡೋರ್ ತೂತಾಗಿ ಚಾಲಕನ ಸೀಟ್ ಗೂ ಹಾನಿಯಾಗಿದೆ. ನಂತರ ಆನೆ ವಾಪಸ್ ಹೋಗಿದೆ. ಈ ವೇಳೆ ಇಬ್ಬರ ಕಾಲು ಮುರಿದಿದ್ದು. ಮೂರು ಮಕ್ಕಳಿಗೆ ಯಾವುದೆ ಗಾಯವಾಗದೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿ ದೊಡ್ಡ ದುರಂತ ತಪ್ಪಿದಂತಾಗಿದೆ. ತಕ್ಷಣ ಸಾರ್ವಜನಿಕರು ಸ್ಥಳಕ್ಕೆ ಬಂದು ಗಾಯಗೊಂಡ ಇಬ್ಬರನ್ನು ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ಸೇರಿಸಿದ್ದಾರೆ. ಇಬ್ಬರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ತಂಗಡಿ ಅರಣ್ಯಾ ಇಲಾಖೆ ತಂಡ ಗಾಯಗೊಂಡವರನ್ನು ಭೇಟಿ ಮಾಡಿ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಆನೆ ಹೋದ ಸ್ಥಳಕ್ಕೆ ಹೋಗಿ ಮಾಹಿತಿ ಪಡೆದುಕೊಂಡಿದ್ದಾರೆ.
ಒಂಟಿ ಸಲಗ ನೆರಿಯ ಸುತ್ತಮುತ್ತ ತಿರುಗಾಟ ನಡೆಸುತ್ತಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ ಮತ್ತಿ ಸಿಬ್ಬಂದಿ ರಾತ್ರಿ ಹೊತ್ತು ಸಂಚಾರಿಸುವ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಗಳನ್ನು ಒಂಟಿ ಸಲಗದ ಬಗ್ಗೆ ನಿಗಾ ಇಡಲು ನೇಮಿಸಲಾಗಿದೆ ಎಂದು ಅರಣ್ಯಾಧಿಕಾರಿ ಮೋಹನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ , ಡಿ.ಆರ್.ಎಫ್.ಓ ಯತೀಂದ್ರ ಮತ್ತು ರಾಜ್ ಶೇಖರ್ , ಅರಣ್ಯ ಗಸ್ತು ಪಾಲಕ ಪಾಂಡುರಂಗ ಕಮತಿ ಮತ್ತು ಅಖಿಲೇಶ್, ಅರಣ್ಯ ಕಾವಲುಗಾರ ಕಿಟ್ಟಣ್ಣ ಮತ್ತು ವಿನಯಚಂದ್ರ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.