ಬೆಳ್ತಂಗಡಿ : ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕಳ್ಳತನವಾಗಿದ್ದ ಓಮಿನಿ ಕಾರು ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ ನಲ್ಲಿ ನ.21 ರಂದು ಸಂಜೆ ಪತ್ತೆಯಾಗಿದ್ದು ಬೆಳ್ತಂಗಡಿ ಸಂಚಾರಿ ಪೊಲೀಸರು ಓಮಿನಿ ಕಾರನ್ನು ಚಿಕ್ಕಮಗಳೂರು ನಗರ ಪೊಲೀಸರ ವಶಕ್ಕೆ ನೀಡಿದ್ದಾರೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಿದ KA-05-Z-7189 ಸಂಖ್ಯೆಯ ಓಮಿನಿ ಕಾರನ್ನು ನ.11 ರಂದು ಕಳ್ಳರು ಕಳ್ಳತನ ಮಾಡಿದ್ದರು. ಈ ಬಗ್ಗೆ ಕಾರು ಮಾಲೀಕ ವೆಂಕಟೇಶ್ ಚಿಕ್ಕಮಗಳೂರು ನಗರ ಠಾಣೆಗೆ ದೂರು ನೀಡಿದ್ದರು. ಬಳಿಕ ಕಾರಿನ ಬಗ್ಗೆ ಮಾಲೀಕ ಸ್ನೇಹಿತರ ಮುಖಾಂತರ ಸಾಮಾಜಿಕ ಜಾಲತಾಣಗಳಲ್ಲಿ ಕಳ್ಳತನವಾಗಿದ್ದ ಕಾರಿನ ಬಗ್ಗೆ ಮಾಹಿತಿ ಹಂಚಿಕೊAಡಿದ್ದರು. ನ.21 ರಂದು ಸಂಜೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ ಬಳಿಯ ರಸ್ತೆ ಬದಿಯಲ್ಲಿ ಧೂಳು ಹಿಡಿದ ರೀತಿಯಲ್ಲಿ ನಿಲ್ಲಿಸಿದ್ದು ಮಾಲೀಕನ ಸ್ನೇಹಿತರಿಗೆ ಕಂಡಿದ್ದು ತಕ್ಷಣ ಮಾಲೀಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಚಿಕ್ಕಮಗಳೂರು ನಗರ ಪೊಲೀಸರಿಗೆ ಮಾಲೀಕ ಮಾಹಿತಿ ನೀಡಿ ನಂತರ ಸ್ಥಳಕ್ಕೆ ಬಂದು ಬೆಳ್ತಂಗಡಿ ಸಂಚಾರಿ ಪೊಲೀಸರ ವಶಕ್ಕೆ ನೀಡಿದ್ದರು. ನಂತರ ಕಾನೂನು ಪ್ರಕ್ರಿಯೆ ಪೂರ್ತಿಗೊಳಿಸಲು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ನ.22 ರಂದು ಮಾಲೀಕ ವೆಂಕಟೇಶ್‌ಗೆ ನೀಡಿದ್ದಾರೆ.