ಬೆಳಾಲು,ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆ ಪ್ರಕರಣ: ಅನೈತಿಕ ಸಂಬಂಧ ವಿಚಾರದಲ್ಲಿ ಗಲಾಟೆ: ಕತ್ತು ಹಿಸುಕಿ ಬಾವಿಗೆ ಹಾಕಿ ಕೊಲೆಗೈದ ಗಂಡ: ಪೊಲೀಸರ ಟ್ರೀಟ್ಮೆಂಟಿಗೆ ಸತ್ಯ ಸಂಗತಿ ಬಯಲು:

 

 

ಬೆಳ್ತಂಗಡಿ :ಬೆಳಾಲು ಗ್ರಾಮದ ಮಾಚಾರಿನ ಕೆಂಚನೊಟ್ಟು ಎಂಬಲ್ಲಿ ವಿವಾಹಿತ ಮಹಿಳೆಯ ಮೃತದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾದ ಘಟನೆ ನ.3ರಂದು ನಡೆದಿತ್ತು. ಪತಿಯ ಅನೈತಿಕ ಸಂಬಂಧ ವಿಚಾರದಲ್ಲಿ ಪತ್ನಿ ಜೊತೆ ಜಗಳವಾಡಿದ್ದು ಇದೆ ವಿಚಾರದಲ್ಲಿ ಕೋಪದಲ್ಲಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಬಾವಿಗೆ ಹಾಕಿ ಕುಟುಂಬದವರಿಗೆ ಹಾಗೂ ಧರ್ಮಸ್ಥಳ ಪೊಲೀಸರಿಗೆ ಆತ್ಮಹತ್ಯೆ ನಾಟವಾಡಿ ಕೊನೆಗೆ ಘಟನಾ ಸ್ಥಳದಲ್ಲಿಯೇ ಅನುಮಾನ ರೀತಿಯಲ್ಲಿ ವರ್ತಿಸಿದಾಗ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಲಾಠಿ ರುಚಿ ತೋರಿಸಿದಾಗ ನೈಜ ಘಟನೆಯ ಸತ್ಯ ಕಕ್ಕಿದ ಪತಿ ಸುಧಾಕರ್ ಇದೀಗ ಅಂದರ್ ಅಗಿದ್ದಾನೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಮಾಚಾರು ಕೆಂಪನೊಟ್ಟು ನಿವಾಸಿ ಶಶಿಕಲಾ (25) ಮೃತಪಟ್ಟ ಮಹಿಳೆ. ಶಶಿಕಲಾ ಪತಿ ಸುಧಾಕರ ನಾಯ್ಕ (31) ನ್ನು ಬಂಧಿಸಲಾಗಿದ್ದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು.ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಮೃತ ಶಶಿಕಲಾ ಹಾಗೂ ಪತಿ ಸುಧಾಕರ್ ನಾಯ್ಕ್ ಸಂಬಂಧಿಕರಾಗಿದ್ದು ಪರಸ್ಪರ ಪ್ರೀತಿಸಿ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತಿ ಸುಧಾಕರ್ ನಾಯ್ಕ್ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ. ಇವರಿಬ್ಬರು ಇಲ್ಲಿನ ತೋಟದ ಮನೆಯಲ್ಲಿಯೇ ಹೊಸ ಮನೆ ಕಟ್ಟಿ ವಾಸಿಸುತ್ತಿದ್ದರು. ಇವರಿಗೆ 6 ವರ್ಷದ ಮಗಳಿದ್ದು, ಘಟನೆ ದಿನ ಮಗಳು ಅಜ್ಜಿಮನೆ ಬೆಳಾಲಿಗೆ ತೆರಳಿದ್ದಳು ಎನ್ನಲಾಗಿದೆ.

*ಘಟನೆ ವಿವರ:* ಗುರುವಾರ ರಾತ್ರಿ ಪತಿ ಪತ್ನಿಯರು ಮಾತ್ರ ಮನೆಯಲ್ಲಿದ್ದರು. ಶುಕ್ರವಾರ ಬೆಳಗ್ಗೆ ಪತಿ ಸುಧಾಕರ್ ರಬ್ಬರ್ ಟ್ಯಾಪಿಂಗ್ ಮಾಡಲು 4 ಗಂಟೆಗೆ ಹೋಗಿದ್ದು ಪ್ರತಿನಿತ್ಯ 8:30 ಕ್ಕೆ ಮನೆಗೆ ಹಿಂದುರಿಗಿದ್ದ ಎನ್ನಲಾಗಿದೆ. ಆದ್ರೆ ಗುರುವಾರ ಬೇಗ ಬಂದಿದ್ದು ಈ ವೇಳೆ ಶಶಿಕಲಾ ನೀರು ತರಲು ಬಾವಿ ಪಕ್ಕ ಬಂದಿದ್ದಾಳೆ ಆಗ ಪತಿ ಜೊತೆ ಇಂದು ಯಾವ ಯುವತಿಯನ್ನು ಕರೆದುಕೊಂಡು ಬರಲಿಕೆ ಇದೆ ಅಂತ ಬೇಗ ಬಂದಿದ್ದಿರಾ ಎಂದಿದ್ದಾಳೆ. ಇದೆ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಇವರಿಬ್ಬರ ಗಲಾಟೆಯಿಂದ ಭಯದಿಂದ ಮನೆಯಲ್ಲಿದ್ದ ನಾಯಿ ಶಶಿಕಲಾ ಕಾಲಿಗೆ ಕಚ್ಚಿಗೆ ನಂತರ ಪತ್ನಿಯ ಕುತ್ತಿಗೆ ಹಿಸುಕಿ ಬಾವಿಗೆ ತಲ್ಲಿದ್ದಾನೆ ಭೂಪ ಪತಿ.

*ಸ್ಥಳಕ್ಕೆ ಪೊಲೀಸರ ಭೇಟಿ:* ಘಟನಾ ಸ್ಥಳಕ್ಕೆ ಅಡಿಷನ್ ಎಸ್ಪಿ , ಬಂಟ್ವಾಳ ಡಿ.ವೈ.ಎಸ್.ಪಿ ಪ್ರತಾಪ್ ಸಿಂಗ್ ತೋರಾಟ್, ಬೆಳ್ತಂಗಡಿ ವೃತ್ತನಿರೀಕ್ಷಕ ನಾಗೇಶ್ ಕದ್ರಿ ಹಾಗೂ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಡಿ ಮತ್ತು ಸಿಬ್ಬಂದಿಗಳು ಆಗಮಿಸಿ ತನಿಖೆ ನಡೆಸಿದ್ದಾರೆ. ಬಳಿಕ ಮಂಗಳೂರು ವಿಧಿವಿಜ್ಞಾನ ತಂಡ ಹಾಗೂ ಎಫ್ಎಸ್ಎಲ್ ತಂಡದ SOCO ಟೀ ನ ಸಿಬ್ಬಂದಿಗಳಾದ ಅರ್ಪಿತಾ ಮತ್ತು ಕಾವ್ಯಶ್ರೀ ಸ್ಥಳಕ್ಕೆ ಆಗಮಿಸಿ ಮೃತದೇಹದಲ್ಲಿ ಅಗಿರುವ ಗಾಯದ ಮತ್ತು ಮನೆಯ ಮುಂದೆ ರಕ್ತ ಹಾರಿದಿರುವ ಬಗ್ಗೆ ಸಾಕ್ಷಿ ಸಂಗ್ರಹಿಸಿದ್ದಾರೆ. ಪರಿಶೀಲಿಸಿದ್ದು, ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆಗೂ ಮಂಗಳೂರಿಗೆ ಕಳುಹಿಸಿ ನಂತರ ತಾಯಿ ಮನೆ ಬೆಳಾಲಿನ ಕೊಲ್ಪಾಡಿಯಲ್ಲಿ ಅಂತ್ಯಸಂಸ್ಕಾರ ನಡೆಸಿದ್ದಾರೆ.

*ಪತಿ ಬಂಧನ:* ಪ್ರಕರಣ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದಿದ್ದರೂ, ಸ್ಥಳದಲ್ಲಿ ಬಾವಿಗೆ ಹೋಗುವ ಹಾದಿಯಲ್ಲಿ ಎಳೆದೊಯ್ದಂತೆ ಗುರುತುಗಳನ್ನು ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಪತ್ತೆ ಹೆಚ್ಚಿತ್ತು‌ . ಬಳಿಕ ಪತಿಯನ್ನು ವಿಚಾರಿಸಿದಾಗ ನಾನು ಟ್ಯಾಪಿಂಗ್ ಮಾಡಿ ಬರುವಾಗ ಬಾವಿಗೆ ಬಿದ್ದಿದ್ದಳು ಎಂದು ಅನುಮಾನದಿಂದ ವರ್ತಿಸಿದ್ದಾನೆ ಇದರಿಂದ ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ಗೆ ಕೋಪ ನೆತ್ತಿಗೇರಿದೆ ತಕ್ಷಣ ಮನೆಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ಲಾಠಿಯಿಂದ ಭಾರಿಸಿದ್ದೆ ತಡ ಸತ್ಯವನ್ನು ಎಲ್ಲ ಕಕ್ಕಿದ್ದಾನೆ, ಸರ್ ಅವಳ ಜೊತೆ ಬೆಳಗ್ಗೆ ಜಗಳವಾಗಿದೆ ನನಗೆ ಪ್ರಶ್ನೆ ಮಾಡಿದ್ದಳು ಇದರಿಂದ ಕೋಪದಿಂದ ಕುತ್ತಿಗೆ ಹಿಸುಕಿ ಬಾವಿಗೆ ತಲ್ಲಿದೆ ಎಂದಿದ್ದಾನೆ. ಬಳಿಕ ಸುಧಾಕರ್ ನನ್ನು ಧರ್ಮಸ್ಥಳ ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿ ಬಳಿಕ ನ.4 ರಂದು ಬಂಧಿಸಿ ಜೈಲಿಗೆ ತಲ್ಲಿದ್ದಾರೆ.

*ಪತಿಯ ಅನೈತಿಕ ಸಂಬಂಧ:* ಸಂಬಂಧದಲ್ಲಿ ಸುಧಾಕರ್ ಮತ್ತು ಶಶಿಕಲಾ ಅಣ್ಣ- ತಂಗಿ ಬಿಳುತ್ತಾರೆ ,ಇಬ್ಬರು ಪ್ರೀತಿಸುತ್ತಿದ್ದು 7 ವರ್ಷದ ಹಿಂದೆ ಮನೆಯವರಿಗೆ ಹೇಳದೆ ಬೆಂಗಳೂರಿಗೆ ಓಡಿಹೋಗಿ ನಂತರ ಇಬ್ಬರು ಗೆಳೆಯರ ಸಹಾಯದಿಂದ ಮದುವೆಯಾಗಿದ್ದರು ಇದರಿಂದ ಸುಧಾಕರ್ ಮಾಚಾರಿನಲ್ಲಿ ಬೇರೆ ಮನೆ ಮಾಡಿ ಜೀವನ ಸಾಗಿಸುತ್ತಿದ್ದರು. ಇದರಿಂದ ಆರು ವರ್ಷದ ಒಂದು ಹೆಣ್ಣು ಮಗು ಇದೆ‌. ಕಳೆದ ಎರಡು ವರ್ಷದ ಹಿಂದೆ ಸುಧಾಕರ್ ಗೆ ಬೇರೆ ವಿವಾಹಿತ ಮಹಿಳೆ ಜೊತೆ ಅನೈತಿಕ ಸಂಬಂಧ ಇತ್ತು. ಈ ವಿಚಾರ ಮಹಿಳೆಯ ಗಂಡನಿಗೆ ಹಾಗೂ ಶಶಿಕಲಾಗೆ ಗೊತ್ತಾಗಿ ಗಂಡ ಸುಧಾಕರ್ ಮನೆಗೆ ಬಂದು ಗಲಾಟೆ ಮಾಡಿದ್ದ. ಇದೇ ವಿಚಾರದಲ್ಲಿ ರಾಜಿ ಪಂಚಾಯತ್ ನಡೆದುಹೋಗಿತ್ತು. ಬಳಿಕ ಸುಧಾಕರ್ ಕದ್ದುಮಚ್ಚಿ ಆಂಟಿ ಜೊತೆ ವ್ಯವಹಾರ ಇಟ್ಟುಕೊಂಡಿದ್ದು ಇತ್ತಿಚೆಗೆ ಮತ್ತೆ ಆಕೆಯ ಸಂಬಂಧ ಮುಂದುವರಿಸಿದ್ದು ಪತ್ನಿ ಶಶಿಕಲಾಗೆ ಗೊತ್ತಾಗಿದೆ ಈ ವಿಚಾರವನ್ನು ತನ್ನ ಚಿಕ್ಕಮ್ಮನಿಗೆ ತಿಳಿಸಿ. ಅವರ ಬುದ್ದಿ ಹಿಂದೆ ಇದ್ದ ಹಾಗೆ ಈಗ ಮತ್ತೆ ಸುರುವಾಗಿದೆ ನಾಳೆ ಸಂಜೆ (ಗುರುವಾರ ಸಂಜೆ) ಮನೆಗೆ ಬಂದು ಎಲ್ಲಾ ಹೇಳುತ್ತೇನೆ ಎಂದಿದ್ದಾಳಂತೆ. ಆದ್ರೆ ವಿಧಿಯಾಟ ಮಾತ್ರ ಜೀವವನ್ನೇ ತೆಗೆದುಕೊಂಡಿದೆ.

error: Content is protected !!